ಮಂಗಳೂರು: ಎಕ್ಕೂರು ಸದಾಶಿವ ಬಡಾವಣೆ ನಿವಾಸಿ, ರೆವೆನ್ಯೂ ಇಲಾಖೆಯ ನಿವೃತ್ತ ಉದ್ಯೋಗಿ ಕೆ. ಸತ್ಯಪ್ರಸಾದ್ (83) ಅವರು ಮಂಗಳವಾರ ನಗರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮಂಗಳೂರು ಜಿಲ್ಲಾಧಿಕಾರಿ ಕಚೇರಿ, ಪುತ್ತೂರು ತಾಲೂಕು ಕಚೇರಿ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ರೆವೆನ್ಯೂ ಇಲಾಖೆಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಎಂಆರ್‌ಪಿಎಲ್‌ನಲ್ಲಿ ಫೀಲ್ಡ್ ಅಧಿಕಾರಿಯಾಗಿದ್ದರು. ಮೂಲತಃ ಪುತ್ತೂರಿನ ಸರ್ವೇ ನಿವಾಸಿಯಾಗಿರುವ ಮೃತರಿಗೆ, ಸುಪ್ರೀತಾ ಕೆ. ಹಾಗೂ ಸುಜಾತಾ ಕೆ. ಎಂಬ ಇಬ್ಬರು ಪುತ್ರಿಯರು ಹಾಗೂ ಇಬ್ಬರು ಸಹೋದರರು ಇದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق