ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಒಂಟೆ ಹಾಲು ಸಂಸ್ಕರಣಾ ಘಟಕ ಆರಂಭ

ಒಂಟೆ ಹಾಲು ಸಂಸ್ಕರಣಾ ಘಟಕ ಆರಂಭ

 


ಕಛ್ (ಗುಜರಾತ್): ಏಷ್ಯಾದ ಮೊದಲ ಡಿಯೋಡರೈಸ್ಡ್ ಒಂಟೆ ಹಾಲು ಸಂಸ್ಕರಣಾ ಘಟಕವು ಗುಜರಾತ್‌ನ ಕಛ್‌ನ ಚಂದ್ರನಿ ಗ್ರಾಮದಲ್ಲಿ ಕಾರ್ಯಾರಂಭಗೊಂಡಿದೆ.


ಇದರೊಂದಿಗೆ, ಒಂಟೆ ಸಾಕಾಣಿಕೆದಾರರ ಆದಾಯ ಮತ್ತು ಜೀವನ ಪರಿಸ್ಥಿತಿಗಳು ಸುಧಾರಿಸುತ್ತಿವೆ. ಒಂದೊಮ್ಮೆ ಪ್ರತಿ ಲೀಟರ್ ಒಂಟೆ ಹಾಲಿಗೆ ಕೇವಲ 20 ರೂ.ಗೆ ಸಿಗುತ್ತಿತ್ತು. ಆದರೆ ಇವಾಗ ಲೀಟರ್ ಒಂಟೆ ಹಾಲು 51 ರೂಪಾಯಿಗೆ ಮಾರಾಟವಾಗುತ್ತಿದೆ. 


ಅಮುಲ್‌ ಕಂಪನಿ ಆರಂಭಿಸಿರುವ ಕಛ್ ಹಾಲು ಘಟಕವು ಒಂಟೆ ಸಾಕಾಣಿಕೆದಾರರಲ್ಲಿ ಜೀವನೋಪಾಯದ ಭರವಸೆ ಹುಟ್ಟಿಸಿದ್ದು, ಒಂಟೆ ಮೇಯಿಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇಡೀ ಪ್ರಪಂಚದಲ್ಲಿ ದುಬೈ ಮತ್ತು ಪಾಕಿಸ್ತಾನಗಳಲ್ಲಿ ಮಾತ್ರ ಒಂಟೆ ಹಾಲು ಸಂಸ್ಕರಿಸುವ ಒಟ್ಟು ಮೂರು ಕೇಂದ್ರಗಳಿವೆ. ಈಗ ಅಲ್ಟ್ರಾ ಮಾಡರ್ನ್​ ಸಂಸ್ಕರಣಾ ಯಂತ್ರದೊಂದಿಗೆ ನಾಲ್ಕನೇ ಸಂಸ್ಕರಣಾ ಕೇಂದ್ರವನ್ನು ಕಛ್‌ನ ಅಂಜಾರ್ ತಾಲೂಕಿನ ಚಂದ್ರನಿ ಗ್ರಾಮದಲ್ಲಿ ಪ್ರಾರಂಭಿಸಲಾಗಿದೆ.

0 تعليقات

إرسال تعليق

Post a Comment (0)

أحدث أقدم