ಮಾರಣಕಟ್ಟೆಯ ಮಹಿಮೆಯ ಬಗ್ಗೆ ಅನೇಕಾನೇಕ ಸತ್ಯ ಘಟನೆಗಳನ್ನು ಕೇಳುತ್ತಲೆ ಬಂದಿದ್ದೇವೆ. ಆದರೆ ನಮ್ಮಂತಹ ಈ ಕಾಲಘಟ್ಟದ ಯುವ ಪೀಳಿಗೆಯು ಕೂಡ ಕಣ್ಣಾರೆ ಕಂಡ ಅನೇಕ ಸತ್ಯಘಟನೆಗಳಿವೆ ಎಂಬುದು ಸತ್ಯ. ಹಬ್ಬದಲ್ಲಿ ಸುತ್ತಾಡುತ್ತ ಮೈಕಿನಲ್ಲಿ ನೀವೆಲ್ಲ ಈ ಹೆಸರು ಕೇಳಿಯೇ ಇರ್ತೀರಿ, "ಮೂರು ದಿನಗಳ ಹಬ್ಬದ ಅನ್ನದಾನದ ಸೇವಾಕರ್ತರು ಶ್ರೀ ನಾಗಲಕ್ಷ್ಮಿ ಸತೀಶ್ ಕೊಠಾರಿ ಮುಂಬಯಿ, ಇವರು ಕಳೆದ ಎಂಟು ವರ್ಷಗಳಿಂದ ಅನ್ನದಾನ ಸೇವೆಯನ್ನು ಮಾಡುತ್ತ ಬಂದಿದ್ದಾರೆ" ಎಂಬುದಾಗಿ.
ದೇವಸ್ಥಾನದ ಎದುರಿಗೆ ದೊಡ್ಡದೊಂದು ಬ್ಯಾನರ್, ಅದರಲ್ಲಿ ನಾಗಲಕ್ಷ್ಮಿ ಸತೀಶ್ ಕೊಠಾರಿಯವರ ಪೋಟೋ ವಿಥ್ ಮುದ್ದಾದ ಎರಡು ಮಕ್ಕಳು. ಸತ್ಯ ವಿಷಯವೆಂದರೆ ಮೊದಲ ವರ್ಷದ ಬ್ಯಾನರಲ್ಲಿ ಅವರ ಮಕ್ಕಳ ಪೋಟೊವೇ ಇರಲಿಲ್ಲ, ಕಾರಣ ಆಗ ಅವರಿಗೆ ಮಕ್ಕಳೇ ಇರಲಿಲ್ಲ!!. ಮಕ್ಕಳಿಲ್ಲದ ದಂಪತಿಗಳು ಮಾರಣಕಟ್ಟೆಗೆ ಬಂದು ಬ್ರಹ್ಮಲಿಂಗನಲ್ಲಿ ಪ್ರಾರ್ಥಿಸಿ ಅನ್ನದಾನ ಆರಂಭಿಸಿ ಬಿಟ್ಟರು, ದಂಪತಿಗಳ ಪ್ರಾರ್ಥನೆ ಫಲಿಸಿತು. ಮರು ವರ್ಷವೇ ದಂಪತಿಗಳು ಮಗುವಿನ ಸಮೇತ ಮಾರಣಕಟ್ಟೆ ಗೆಂಡಕ್ಕೆ ಬಂದಿದ್ದರು!!.
ಕಳೆದ ಎಂಟು ವರ್ಷಗಳಿಂದ ಅವರು ಅನ್ನದಾನ ಸೇವೆ ಮಾಡುತ್ತಿದ್ದಾರೆ, ಈಗ ಅವರಿಗೆ ಎರಡು ಮಕ್ಕಳು.!! ಶ್ರೀ ಶಂಕರಾಚಾರ್ಯರು ಶ್ರೀಚಕ್ರ ಸ್ಥಾಪಿಸಿದ ಶ್ರೀಕ್ಷೇತ್ರ ಮಾರಣಕಟ್ಟೆಯ ಮಹಿಮೆ ಅಂತಹದ್ದು. ನಾವೆಲ್ಲ ಅಲ್ಲಿ ಜನಿಸಿದ್ದೇವೆ ಎನ್ನುವುದಕ್ಕೆ ಹೆಮ್ಮೆ ಪಡುತ್ತೇವೆ. ನೊಂದವರ ಪಾಲಿಗೆ ರಕ್ಷಕನಂತೆ, ಬೇಡಿದವರ ಬಯಕೆ ಈಡೇರಿಸುವ ಆಪದ್ಬಾವನಂತೆ, ಸಂಕಷ್ಟಗಳನ್ನು ಆಲಿಸಿ ಅದೆಲ್ಲವನ್ನು ಕ್ಷಣಮಾತ್ರದಲ್ಲಿ ದೂರವಾಗಿಸುವ ತಂದೆಯಂತೆ, ಹೀಗೆಲ್ಲ ಕಾಣುವ ಬ್ರಹ್ಮಲಿಂಗೇಶ್ವರನ ಪ್ರಾರ್ಥನೆಯೊಂದಿಗೆ ಅನೇಕರ ಮುಂಜಾವು ಆರಂಭ ಆಗುತ್ತದೆ.
ಇಲ್ಲಿ ಮಂಗಳಾರತಿಯ ಪ್ರಸಾದ ಆಗುವ ರೀತಿ ಎಣಿಸಿದರೆ ಮೈ ಜುಮ್ ಎನ್ನುತ್ತದೆ. ಅಂತಹದೊಂದು ಅಪಾರ ಪಾಸಿಟಿವ್ ಎನರ್ಜಿಯ ಶಕ್ತಿ ಪೀಠ ಮಾರಣಕಟ್ಟೆ. ಇಲ್ಲಿ ನಿಷ್ಕಲ್ಮಶವಾಗಿ ಪ್ರಾರ್ಥಿಸಿ ಹೊರಟರೆ ಜಯ ಖಂಡಿತ. ಎಂತೆಂತೆಹ ಸಂಕಷ್ಟಗಳೆಲ್ಲ ದಿನಮಾತ್ರದಲ್ಲಿ ಕ್ಷಣಮಾತ್ರದಲ್ಲಿ ನಿವಾರಣೆ ಆಗಿದನ್ನು ಅನುಭವಿಸಿದ್ದೇನೆ. ನಾನಿಲ್ಲಿ ಬೇಡಿಕೊಂಡಿದ್ದು ಈಡೇರದೇ ಇರುವ ವಿಷಯಗಳೇ ಇಲ್ಲ - ಬ್ರಹ್ಮಲಿಂಗನ ನಂಬಿ ಸೋತವರೇ ಇಲ್ಲ.
-ನಾಗರಾಜ್ ನೈಕಂಬ್ಳಿ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment