ನವದೆಹಲಿ: ಇ-ಕಾಮರ್ಸ್ ದೈತ್ಯ ಅಮೆಜಾನ್(Amazon) ತನ್ನ ಉದ್ಯೋಗಿಗಳಿಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದೆ. ಮತ್ತೆ 2300 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ.
ಅಮೆಜಾನ್‌ನ ಹೊಸ ಸುತ್ತಿನ ವಜಾಗೊಳಿಸುವ ಭಾಗವಾಗಿ ಸಿಯಾಟಲ್ ಪ್ರದೇಶದಲ್ಲಿ ಕನಿಷ್ಠ 2,300 ಅಮೆಜಾನ್ ಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವಾಷಿಂಗ್ಟನ್ ಸ್ಟೇಟ್ ಡಿಪಾರ್ಟ್‌ಮೆಂಟ್ ಆಫ್ ಎಂಪ್ಲಾಯ್‌ಮೆಂಟ್ ಸೆಕ್ಯುರಿಟಿಗೆ ಬುಧವಾರ ಮಧ್ಯಾಹ್ನ ಸಲ್ಲಿಸಿದ ನೋಟಿಸ್ ತಿಳಿಸಿದೆ.
ರಾಜ್ಯ ಉದ್ಯೋಗ ಭದ್ರತಾ ಇಲಾಖೆಗೆ ಸಲ್ಲಿಸಿದ ಸೂಚನೆಯ ಪ್ರಕಾರ, ಸಿಯಾಟಲ್‌ನಲ್ಲಿ 1,852 ಮತ್ತು ವಾಷಿಂಗ್ಟನ್‌ನ ಬೆಲ್ಲೆವ್ಯೂನಲ್ಲಿ 448 ಉದ್ಯೋಗಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ನೋಟಿಸ್ ಹೇಳಿದೆ.
إرسال تعليق