ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೆನರಾ ಬ್ಯಾಂಕ್ ನಲ್ಲಿ ಶೇ. 7.25 ರಷ್ಟು ಹೊಸ ಠೇವಣಿ ಯೋಜನೆ ಆರಂಭ

ಕೆನರಾ ಬ್ಯಾಂಕ್ ನಲ್ಲಿ ಶೇ. 7.25 ರಷ್ಟು ಹೊಸ ಠೇವಣಿ ಯೋಜನೆ ಆರಂಭ

 



400 ದಿನಗಳ ಹೊಸ ಠೇವಣಿ ಯೋಜನೆಗಳನ್ನು ಕೆನರಾ ಬ್ಯಾಂಕ್ ಆರಂಭಿಸಿದೆ.


ಶೇಕಡ 7.15 ರಷ್ಟು ಬಡ್ಡಿ ದರದ ಯೋಜನೆಯಡಿ 25,000 ರೂ.ನಿಂದ 2 ಕೋಟಿ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಅವಧಿಗೆ ಮೊದಲು ಠೇವಣಿ ಹಿಂಪಡೆಯುವುದು ಅಥವಾ ಠೇವಣಿಯ ಒಂದಿಷ್ಟು ಪಾಲನ್ನು ಪಡೆದುಕೊಳ್ಳಲು ಈ ಯೋಜನೆಯಲ್ಲಿ ಅವಕಾಶವಿದೆ.


ಅವಧಿಗೆ ಮೊದಲು ಠೇವಣಿ ಹಣ ಹಿಂಪಡೆಯಲು, ಒಂದಿಷ್ಟು ಪಾಲನ್ನು ಹಿಂಪಡೆಯಲು ಅವಕಾಶ ಇಲ್ಲದ ಯೋಜನೆ ಅಡಿ 15 ಲಕ್ಷ ರೂ.ನಿಂದ 2 ಕೋಟಿ ಇರುವವರೆಗೆ ಹಣ ಹೂಡಿಕೆ ಮಾಡಬಹುದಾಗಿದ್ದು, ಇದಕ್ಕೆ ಶೇಕಡ 7.25 ರಷ್ಟು ಬಡ್ಡಿ ದರ ನೀಡಲಾಗುವುದು. 


ಈ ಯೋಜನೆಗಳಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇಕಡ 0.50 ರಷ್ಟು ಬಡ್ಡಿ ನೀಡಲಾಗುವುದು ಎಂದೂ ಕೆನರಾ ಬ್ಯಾಂಕ್ ಮಾಹಿತಿ ನೀಡಿದೆ.

0 تعليقات

إرسال تعليق

Post a Comment (0)

أحدث أقدم