ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಂಟ್ವಾಳ ತಾಲೂಕು, ಪಿಲಾತಬೆಟ್ಟು ಕಾರ್ಯಕ್ಷೇತ್ರದಲ್ಲಿ ಶ್ರದ್ದಾ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ವರ್ಷಾವಧಿ ಜಾತ್ರೆಯ ಪ್ರಯುಕ್ತ ಶ್ರೀ ಬ್ರಹ್ಮ ಬೈದೆರ್ಕಳ ಗರಡಿ ಕುತ್ತಿಲದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು.
ಈ ವೇಳೆ ಪಿಲಾತಬೆಟ್ಟು ಒಕ್ಕೂಟ ಅಧ್ಯಕ್ಷರಾದ ಗಂಗಾಧರ ಕಂಚಿನೋಡಿ, ನೈನಾಡು ಒಕ್ಕೂಟದ ಅಧ್ಯಕ್ಷರಾದ ಜಯಲಕ್ಷ್ಮಿ ಹೆಗ್ಡೆ, ಮೆಲ್ವಿಚಾರಕರಾದ ಅಶ್ವಿನಿ,ಸೇವಾಪ್ರತಿನಿಧಿ ಅಮೃತಾ ಎಸ್, ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷರಾದ ಸೌಮ್ಯ ಮೋನಪ್ಪ, ಪಂಚಾಯತ್ ಸದಸ್ಯರಾದ ಕಾಂತಪ್ಪ ಕರ್ಕೇರ ಹಾಗೂ ಪಿಲಾತಬೆಟ್ಟು ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.
إرسال تعليق