ಮೈಸೂರು: ರಾಜ್ಯಾದ್ಯಂತ ಇಂದು (ಜ.15) ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗಾಗಿ ಯೋಗಥಾನ್ ಆಯೋಜಿಸಲಾಗಿದ್ದು, ನಗರದ ರೇಸ್ ಕೋರ್ಸ್ ಆವರಣದಲ್ಲಿ ನಡೆಯುತ್ತಿರುವ ಯೋಗಥಾನ್ ಕಾರ್ಯಕ್ರಮದಲ್ಲಿ ಯೋಗ ಮಾಡುವಾಗ ಚಳಿಗೆ ಮೂವರು ವಿದ್ಯಾರ್ಥಿಗಳು ಕುಸಿದು ಬಿದ್ದಿದ್ದಾರೆ.
ಕೂಡಲೇ ಯೋಗಪಟುಗಳು ಕಾಲು, ಕೈ ಉಜ್ಜಿ ದೇಹದ ಉಷ್ಣತೆಯನ್ನ ಹೆಚ್ಚಿಸಿದ್ದು, ಬಳಿಕ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ನಗರದ ರೇಸ್ ಕೋರ್ಸ್ ಆವರಣದಲ್ಲಿ ನಡೆಯುತ್ತಿರುವ ಯೋಗಥಾನ್ ಕಾರ್ಯಕ್ರಮದಲ್ಲಿ ಮುಂದಿನ ವರ್ಷ ಯೋಗ ದಿನಾಚರಣೆಗೆ ಬಾಬಾ ರಾಮ್‌ದೇವ್‌ಗೆ ಆಹ್ವಾನ ನೀಡಲಾಗುವುದು ಎಂದು ಯೋಗಥಾನ್‌ನಲ್ಲಿ ಒಮ್ಮತದ ನಿರ್ಧಾರ ಮಾಡಲಾಗಿದ್ದು, ಒಂದೂವರೆ ಲಕ್ಷ ಜನರನ್ನು ಸೇರಿಸಿ ಏಕ ಕಾಲಕ್ಕೆ ಯೋಗ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಸಿದ್ದತೆ ಮಾಡಲಾಗುವುದು ಹಾಗೂ ಬಾಬಾ ರಾಮ್ ದೇವ್ ಭಾರತದ ಯೋಗಾ ಐಕಾನ್ ಆಗಿದ್ದು ಅವರ ಆಗಮನದಿಂದ ಮೈಸೂರಿನ ಯೋಗಕ್ಕೆ ಮತ್ತಷ್ಟು ಶಕ್ತಿ ಬರಲಿದೆ.
ಬಾಬಾ ರಾಮ್ ದೇವ್ ಅವರನ್ನು ಟಿವಿಯಲ್ಲಿ ನೋಡಿದ್ದು, ನಮ್ಮ ಕಣ್ಣ ಮುಂದೆ ಬಂದು ಯೋಗ ಮಾಡುವುದು ನೋಡುವುದೇ ಸಂತೋಷ ಎಂದು ಶಿಕ್ಷಣ ತಜ್ಞ ಶ್ರೀಹರಿ ಹೇಳಿದರು.
إرسال تعليق