ಕರ್ನಾಟಕ ಹಾಲು ಮಹಾಮಂಡಳ 'ನಂದಿನಿ' ಬ್ರಾಂಡ್ ಹೆಸರಿನಲ್ಲಿ ಹಾಲು, ಮೊಸರು, ಮಜ್ಜಿಗೆ, ತುಪ್ಪ ಮೊದಲಾದ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಜೊತೆಗೆ ಸಿಹಿ ಉತ್ಪನ್ನಗಳನ್ನು ಸಹ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ನಂದಿನಿ ಉತ್ಪನ್ನಗಳಿಗೆ ಅಪಾರ ಬೇಡಿಕೆ ಇದ್ದು, ಗುಣಮಟ್ಟದ ಕಾರಣಕ್ಕೆ ಜನಮನ್ನಣೆ ಪಡೆದಿದೆ.
ಅಲ್ಲದೆ, ಆಕರ್ಷಕ ಪ್ಯಾಕಿಂಗ್ ನಲ್ಲಿ ದೀರ್ಘಕಾಲ ಬಾಳಿಕೆ ಬರುವ ಸಿಹಿ ಉತ್ಪನ್ನಗಳನ್ನು ಸಹ ತಯಾರಿಸುತ್ತಿದೆ.
ಇದೀಗ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನಂದಿನಿ ಸಿಹಿ ಉತ್ಸವ ಆಚರಿಸುತ್ತಿದ್ದು, ಸಿಹಿ ಉತ್ಪನ್ನಗಳ ಶ್ರೇಣಿಗಳಿಗೆ ಶೇಕಡಾ 20ರಷ್ಟು ರಿಯಾಯಿತಿ ನೀಡುತ್ತಿದೆ. ಡಿಸೆಂಬರ್ 19 ರಿಂದ ಸೀಮಿತ ಅವಧಿಯವರೆಗೆ ಮಾತ್ರ ಇದು ಲಭ್ಯವಾಗಲಿದ್ದು, ಗ್ರಾಹಕರು ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.
إرسال تعليق