ವಿಟ್ಲ : ವಿವಾಹಿತ ಮಹಿಳೆ ಅ.29 ರಿಂದ ನಾಪತ್ತೆಯಾಗಿದ್ದಾರೆ ಎಂದು ಆಕೆಯ ಮನೆಯವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ವಿಟ್ಲಪಟ್ನೂರು ಗ್ರಾಮದ ಕಡಂಬು ನಿವಾಸಿ ಕವಿತಾ (29) ಕಾಣೆಯಾದವರು. ಕೆಲಸ ಮುಗಿಸಿ, ಸಂಜೆ ತಾಯಿ ಮನೆಗೆ ಹೋಗುತ್ತೇನೆಂದು ಬೆಳಗ್ಗೆ ಮನೆಯಲ್ಲಿ ಹೇಳಿದ್ದರು.
ಆದರೆ ಆಕೆ ತಾಯಿ ಮನೆಗೂ ಹೋಗದೆ ಕಾಣೆಯಾಗಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಎಲ್ಲೆಡೆ ಹುಡುಕಾಡಿದರೂ ಕವಿತಾ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
إرسال تعليق