ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸ್ನೇಹಿತರ ಜೊತೆ ದೇವಾಲಯಕ್ಕೆ ತೆರಳಿದ ವಿದ್ಯಾರ್ಥಿ ಚಿರತೆ ದಾಳಿಗೆ ಬಲಿ

ಸ್ನೇಹಿತರ ಜೊತೆ ದೇವಾಲಯಕ್ಕೆ ತೆರಳಿದ ವಿದ್ಯಾರ್ಥಿ ಚಿರತೆ ದಾಳಿಗೆ ಬಲಿ

 


ಮೈಸೂರು: ತಿ.ನರಸೀಪುರ ತಾಲ್ಲೂಕಿನ ಮದ್ಗಾರ್ ಲಿಂಗಯ್ಯನಹುಂಡಿ ಗ್ರಾಮದ ಬಳಿ ಚಿರತೆ ದಾಳಿಗೆ ಯುವಕ ಬಲಿಯಾಗಿದ್ದಾನೆ.

ಮಹಾರಾಜ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ (18) ಮೃತಪಟ್ಟ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಮಲ್ಲಪ್ಪನ ಬೆಟ್ಟದ ಸಮೀಪವಿರುವ ಮುದ್ದು ಮಾರಮ್ಮ ದೇವಾಲಯಕ್ಕೆ ಸ್ನೇಹಿತರೊಂದಿಗೆ ಪೂಜೆಗೆಂದು ಹೋಗಿದ್ದಾಗ ಘಟನೆಯೊಂದು ನಡೆದಿದೆ.


ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದಾಗ ಪೊದೆಯಿಂದ ಜಿಗಿದು ಬಂದ ಚಿರತೆ ಯುವಕನ ಮೇಲೆ ದಾಳಿ ನಡೆಸಿದ್ದು, ಸ್ನೇಹಿತರು ಚಿರತೆಗೆ ಕಲ್ಲು ಹೊಡೆದು ಮಂಜುನಾಥ್‌ನನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಗ್ರಾಮಸ್ಥರು ಯುವಕರ ಸಹಾಯಕ್ಕೆ ಬರುವಷ್ಟರಲ್ಲಿ ಆತ​ ಮೃತಪಟ್ಟಿದ್ದನು. ಈ ಘಟನೆಯ ಹಿನ್ನೆಲೆ ಮಲ್ಲಪ್ಪನ ಬೆಟ್ಟದ ಸುತ್ತಮುತ್ತಲಿನ ಗ್ರಾಮದ ಜನ ರಾತ್ರಿಯ ವೇಳೆ ಮನೆಯಿಂದ ಹೊರಬರಲು ಭಯಭೀತರಾಗಿದ್ದಾರೆ.



0 تعليقات

إرسال تعليق

Post a Comment (0)

أحدث أقدم