ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಪರಿಚಿತ ಹಾದಿ ಆತ್ಮೀಯವಾದ ಬಗೆಯ ಬಲ್ಲಿರಾ

ಅಪರಿಚಿತ ಹಾದಿ ಆತ್ಮೀಯವಾದ ಬಗೆಯ ಬಲ್ಲಿರಾ

 

ದ್ವಿತೀಯ ಪಿಯುಸಿ ಮುಗಿಸಿ, ಮುಂದೆ ಯಾವ ಕಾಲೇಜು ಸೇರಿಕೊಳ್ಳುವುದೆಂದು ಯೋಚಿಸುತ್ತಿರುವಾಗ ಮೊದಲಿಗೆ ನೆನಪು ಬಂದದ್ದೇ ವಿವೇಕಾನಂದ ಕಾಲೇಜು. ಕಾಲೇಜು ಯಾವುದೆಂಬ ಗೊಂದಲಕ್ಕೆ ವಿರಾಮ ಸಿಕ್ಕರು ಯಾವ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ತಲೆಕೆಡಿಸಲಾರಂಭಿಸಿತು ಆಗ ಪರಿಚಿತರೊಬ್ಬರು ಪತ್ರಿಕೋದ್ಯಮ ವಿಭಾಗದ ಬಗ್ಗೆ ಹೇಳಿದರು. ಇದರ ಬಗ್ಗೆ ಒಂದು ಚೂರು ಗೊತ್ತಿಲ್ಲದ ನಾನು ಇದೇ ವಿಷಯವನ್ನು ನನ್ನ ಕಲಿಕೆಯ ವಿಷಯವಾಗಿ ಆಯ್ದುಕೊಂಡೆ.

ಆಯ್ಕೆಯ ಪ್ರಕ್ರಿಯೆಗಳು ಮುಗಿದ ನಂತರ ತರಗತಿಗಳು ಪ್ರಾರಂಭವಾದವು. ಪತ್ರಿಕೋದ್ಯಮದ ಮೊದಲ ತರಗತಿ ಯಾಕೋ ಮನಸ್ಸಿಗೆ ತುಂಬಾ ಹತ್ತಿರವಾಯಿತು. ಹೊಸ ಕಾಲೇಜಿನಲ್ಲಿ ಮೊದಲ ದಿನ ಭಯದಲ್ಲಿದ್ದ ನಾವು ಸ್ವಲ್ಪ ಮಟ್ಟಿಗೆ ನಿರಳಾಗಿದ್ದು ಪತ್ರಿಕೋದ್ಯಮ ತರಗತಿಯ ನಂತರವೇ ಮೊದಲು ಈ ವಿಷಯ ಸುಲಭ ಇರಬಹುದು, ಆಂಕರಿಂಗ್ ಎಡಿಟಿಂಗ್, ಪೇಜಿನೇಷನ್ ಎಲ್ಲಾ ಸುಲಭ ಎಂದುಕೊಂಡಿದ್ದ ನನಗೆ ಕನ್ನಡ ಟೈಪ್ ಮಾಡುವುದೇ ಬಲು ಕಷ್ಟವಾಯಿತು. ಹಾಗೆ ಇಲ್ಲಿ ಸೇರಿಕೊಂಡ ನಂತರ ಎಲ್ಲರೂ ಹೇಳುತ್ತಿದ್ದದೆ ಆರ್ಟಿಕಲ್ ಬರೆಯಲು ಆದರೆ ಕನ್ನಡ ಟೈಪ್ ಮಾಡಲೇ ಕಷ್ಟಪಡುತ್ತಿದ್ದ ನನಗೆ ಆರ್ಟಿಕಲ್ ಬರೆಯುವ ಆಸಕ್ತಿಯೇ ಹುಟ್ಟುತ್ತಿರಲಿಲ್ಲ.

ಪತ್ರಿಕೋದ್ಯಮ ಸೇರಿಕೊಂಡು ಯಾವುದೇ ಕ್ಷೇತ್ರದಲ್ಲೂ ಕಾಣಿಸಿಕೊಳ್ಳಲಾಗುತ್ತಿಲ್ಲ ಎಂಬ ಬೇಜಾರು ಇತ್ತು. ಆದರೆ ಕಾಲೇಜಿನ ರೇಡಿಯೋದಲ್ಲಿ ಕಾರ್ಯಕ್ರಮಗಳನ್ನು ನೀಡುವ ಅವಕಾಶವನ್ನು ಇದೇ ಪತ್ರಿಕೋದ್ಯಮ ವಿಭಾಗ ನೀಡಿತು.
ಮೂರು ವರ್ಷಗಳ ಪತ್ರಿಕೋದ್ಯಮ ಪದವಿ ಮುಗಿದ ನಂತರ, ಪತ್ರಿಕೋದ್ಯಮದಲ್ಲೇ ಸ್ನಾತಕೋತ್ತರ ಮಾಡುವ ಅವಕಾಶ ದೊರೆಯಿತು. ಎಲ್ಲಾ ವಿಷಯಗಳು ಗೊಂದಲಮಯ ಕಷ್ಟವೆಂದು ಕೊಂಡಿದ್ದ ನನಗೆ ಇಲ್ಲಿಂದ ಅನೇಕ ವಿಷಯಗಳು ಸುಲಭವಾಗಿ ಬಿಟ್ಟಿತ್ತು.

ಎರಡು ವರ್ಷದ ಸ್ನಾತಕೋತ್ತರ ಪದವಿಯಲ್ಲಿ ನಾನು ಕಲಿತದ್ದು ಅನೇಕ ವಿಷಯಗಳು ಯಾವ ವಿಷಯ ಕಷ್ಟ ನನ್ನಿಂದ ಸಾಧ್ಯವೇ ಇಲ್ಲ ಎಂದುಕೊಂಡಿದ್ದೇನೋ ಅದೇ ವಿಷಯಗಳು ಇಂದು ನನಗೆ ಪ್ರಿಯವಾದದ್ದು.
ಗೊತ್ತಿದ್ದೋ ಗೊತ್ತಿಲ್ಲದೆಯೋ ಒಳ್ಳೆಯ ಹಾದಿಯನ್ನೇ ಆಯ್ದುಕೊಂಡೆ ಎಂಬ ಸಂತೃಪ್ತಿಯ ಭಾವ ನನ್ನಲ್ಲಿದೆ. ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ನನ್ನೊಲುಮೆಯ ಧನ್ಯವಾದಗಳು.
                                                                                                                                ದೀಕ್ಷಿತಾ ಜೆಡರಕೋಡಿ

0 تعليقات

إرسال تعليق

Post a Comment (0)

أحدث أقدم