ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ನಡೆಯುವ ಸರಣಿ ಕೃತಿಗಳು ಬಿಡುಗಡೆ ಕಾರ್‍ಯಕ್ರಮದ 36ನೇ ಕೃತಿ ಬಿಡುಗಡೆ ಉಪನ್ಯಾಸಕ, ಲೇಖಕ ಡಾ. ಎನ್. ಪ್ರವೀಣ್‌ಚಂದ್ರ ಇವರ ಲೇಖನ ಸಂಕಲನ ಸ್ಪೂರ್ತಿಯ ಚಿಲುಮೆಗಳು ಕೃತಿ ಬಿಡುಗಡೆ ಕಾರ್‍ಯಕ್ರಮ ಮಂಗಳೂರು ಪತ್ರಿಕಾ ಭವನದಲ್ಲಿ ಅಕ್ಟೋಬರ್ 17ರಂದು ಸೋಮವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಹಾಗೂ ಸೂರಜ್ ಎಜುಕೇಶನ್ ಟ್ರಸ್ಟ್ ಮುಡಿಪು ಇದರ ಅಧ್ಯಕ್ಷರಾದ ಡಾ. ಮಂಜುನಾಥ್ ಎಸ್. ರೇವಣಕರ್‌ರವರು ಕೃತಿ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಆಳ್ವಾಸ್ ಕಾಲೇಜ್ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಯೋಗೀಶ್ ಕೈರೋಡಿ ಕೃತಿ ಪರಿಚಯ ಮಾಡುವರು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ವಹಿಸುವರು. ಲೇಖಕ, ಉಪನ್ಯಾಸಕ ಡಾ. ಪ್ರವೀಣ್‌ಚಂದ್ರ ಹಾಗೂ ಕವಯತ್ರಿ ಸುರೇಖಾ ಯಾಳವಾರ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق