ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು; ಬ್ಯಾಂಕ್ ಮ್ಯಾನೇಜರ್ ನೇಣುಬಿಗಿದು ಆತ್ಮಹತ್ಯೆಗೆ ಶರಣು

ಮಂಗಳೂರು; ಬ್ಯಾಂಕ್ ಮ್ಯಾನೇಜರ್ ನೇಣುಬಿಗಿದು ಆತ್ಮಹತ್ಯೆಗೆ ಶರಣು

 


ಮಂಗಳೂರು : ನಗರದ ಶರ್ಬತ್ ಕಟ್ಟೆಯ ಫ್ಲ್ಯಾಟ್‌ನ ನಿವಾಸಿ, ಕೆನರಾ ಬ್ಯಾಂಕ್ ಬಿಜೈ ಬ್ರಾಂಚ್‌ನ ಮ್ಯಾನೇಜರ್‌ ಪದ್ಮಾವತಿ (52) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


ಮೂಲತಃ ಶಕ್ತಿನಗರದ ಪದ್ಮಾವತಿ ಶರ್ಬತ್ ಕಟ್ಟೆಯಲ್ಲಿ‌ ಇತ್ತೀಚೆಗೆ ‌ಪ್ಲ್ಯಾಟ್‌ ಖರೀದಿಸಿದ್ದು, ಗೃಹಪ್ರವೇಶ ಕಾರ್ಯಕ್ರಮ ಕಳೆದ ಸೋಮವಾರ ನಡೆದಿತ್ತು‌.

ಬುಧವಾರ ಸಂಜೆ ‌ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ‌ ಎಂದು ತಿಳಿದುಬಂದಿದೆ.


ಬ್ಯಾಂಕ್ ನ ಹಿರಿಯ ಅಧಿಕಾರಿಯ ಕಿರುಕುಳದಿಂದ ಆತ್ಮಹತ್ಯೆ ನಡೆದಿದೆ ಎಂದು ದೂರಲಾಗಿದೆ.

ಕೆಲಸದ ಒತ್ತಡದಿಂದ ಪದ್ಮಾವತಿ ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 تعليقات

إرسال تعليق

Post a Comment (0)

أحدث أقدم