ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇನ್ಮುಂದೆ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತರುವಂತಿಲ್ಲ

ಇನ್ಮುಂದೆ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತರುವಂತಿಲ್ಲ

 


ಬೆಂಗಳೂರು : ನಗರದಲ್ಲಿ ಬೈಕ್ ವ್ಹೀಲಿಂಗ್ ​ ಹಾವಳಿ ಹೆಚ್ಚಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಇನ್ಮುಂದೆ ಪಿಯುಸಿ 
ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ‌ತರುವಂತಿಲ್ಲ
ಎಂದು ಜಂಟಿ ಪೊಲೀಸ್ ಆಯುಕ್ತ ಡಾ .ಬಿ.ಆರ್. ರವಿಕಾಂತೇಗೌಡ ಸೂಚನೆ ನೀಡಿದ್ದಾರೆ.

ನಗರದಲ್ಲಿ ಬೆಳ್ಳಂಬೆಳಗ್ಗೆ ಅಥವಾ ಸಂಜೆ ಹದಿಹರೆಯದ ಹುಡುಗರು ಬೈಕ್ ಏರಿ ಸರ್ಕಸ್​ ಮಾಡುತ್ತಾರೆ.

ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಹಾಕಿ ಲೈಕ್ಸ್ ಪಡೆಯಲು ವ್ಹೀಲಿಂಗ್ ಮಾಡಿದರೆ, ಇನ್ನೂ ಕೆಲವರು ಹುಡುಗಿಯರನ್ನು ಇಂಪ್ರೆಸ್​ ಮಾಡಲು ವ್ಹೀಲಿಂಗ್ ಮಾಡುತ್ತಾರೆ.

ಇದರ ಜೊತೆಗೆ ಮೀಸೆ ಚಿಗುರದ ಪಿಯು ವಿದ್ಯಾರ್ಥಿಗಳೂ ಇದ್ದಾರೆ. ಇಂತವರ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬಂದಿದ್ದು ನಗರ ಸಂಚಾರಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.


ಕರ್ನಾಟಕ ಮೋಟಾರು ವಾಹನಗಳ ನಿಯಮಗಳ ಪ್ರಕಾರ ಚಾಲನಾ ಪರವಾನಗಿ ಪಡೆಯಲು ಕನಿಷ್ಠ ವಯಸ್ಸಿನ (18 ವರ್ಷಗಳು) ಮಾನದಂಡಗಳನ್ನು ಪೂರೈಸದ ಕಾರಣ ಪಿಯು ವಿದ್ಯಾರ್ಥಿಗಳು ಕಾಲೇಜಿಗೆ ಮೋಟಾರು ವಾಹನಗಳನ್ನು ತೆಗೆದುಕೊಳ್ಳಲು ಅನುಮತಿಸುವುದಿಲ್ಲ.

ವಿದ್ಯಾರ್ಥಿಗಳು ಒಂದು ವೇಳೆ ಕಾಲೇಜಿಗೆ ಗಾಡಿ ತೆಗೆದುಕೊಂಡು ಬಂದಿರುವುದು ಗೊತ್ತಾದರೆ ವಾಹನ ಜಪ್ತಿ ಮಾಡಿ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಪರಾಧದ ಆಧಾರದ ಮೇಲೆ ಅವರಿಗೆ ದಂಡ ಮತ್ತು ಚಾರ್ಜ್‌ಶೀಟ್ ಹಾಕಲಾಗುತ್ತದೆ ಎಂದು ರವಿಕಾಂತೇಗೌಡ ಅವರು ತಿಳಿಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم