ಕೇರಳ: ಇಲ್ಲಿನ ಕಣ್ಣೂರು ಜಿಲ್ಲೆಯ ಮಟ್ಟನ್ನೂರಿನ ಕಾಸಿಮುಕ್ಕು ಎಂಬಲ್ಲಿ ಬಾಡಿಗೆ ಮನೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ತಂದೆ ಮತ್ತು ಮಗ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ.
ಮಾಹಿತಿಗಳ ಪ್ರಕಾರ, ಸ್ಕ್ರ್ಯಾಪ್ ಸಂಗ್ರಹಿಸಲು ತೊಡಗಿದ್ದ ಅಸ್ಸಾಂ ಮೂಲದ ಫಸಲ್ ಹಕ್ (45) ಮತ್ತು ಮಗ ಶಹೀದುಲ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ.
ಇವರು ಗುಜರಿ ಹೆಕ್ಕಿ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು, ಸ್ಕ್ರ್ಯಾಪ್ ಸಂಗ್ರಹದ ವೇಳೆ ತಮಗೆ ದೊರೆತಿದ್ದ ಸ್ಟೀಲ್ ಬಾಕ್ಸ್‌ವೊಂದನ್ನು ಮನೆಗೆ ತಂದು ಓಪನ್ ಮಾಡಿದ ತಕ್ಷಣ ಅದು ಸ್ಫೋಟಗೊಂಡಿದೆ.
ಈ ವೇಳೆ ಫಸಲ್ ಹಕ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮಗ ಶಹೀದುಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಬುಧವಾರ ಸಂಜೆ 5.30ಕ್ಕೆ ಅಪಘಾತ ಸಂಭವಿಸಿದೆ. ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಬಾಂಬ್ ಸ್ಕ್ವಾಡ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸ್ಫೋಟಕ್ಕೆ ಏನು ಬಳಸಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
إرسال تعليق