ಮಂಗಳೂರು: ಶ್ರೀ ಗಂಗಾಧರ್ ಗಾಂಧಿ ನೇತ್ರತ್ವದ NSCDF ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಂಗಳೂರು ಪುರಭವನದಲ್ಲಿ ಸಂಸ್ಕೃತಿ ಜಾತ್ರೆ ಕಾರ್ಯಕ್ರಮವು ಅತ್ಯಂತ ಅದ್ದೂರಿಯಿಂದ ದಿನಾಂಕ 03/07/2022 ರಂದು ಜರುಗಿತು. ಈ ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ನಡೆಯಿತು.
ಈ ಸಮಾರಂಭದ ಉದ್ಘಾಟನೆಯನ್ನು ಜಸ್ಟೀಸ್ ಅರಳಿ ನಾಗರಾಜ್ ಗೌರವಾನ್ವಿತ ವಿಶ್ರಾಂತ ಹೈಕೋರ್ಟ್ ನ್ಯಾಯಧೀಶರು ಬೆಂಗಳೂರು ಇವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಶ್ರೀ ಗಂಗಾಧರ ಗಾಂಧಿ ಮಾನ್ಯ ಅಧ್ಯಕ್ಷರು NSCDF ಇವರು ವಹಿಸಿದರು. ಶ್ರೀ ರವೀಂದ್ರ ಮುನ್ನಿಪ್ಪಾಡಿ, ಶ್ರೀಮತಿ ರಾಣಿ ಪುಷ್ಪಲತಾ ದೇವಿ ಡಾ. ಸುರೇಶ ನೆಗಳಗುಳಿ ರೇಮಂಡ್ ಡಿಕೂನ ಶ್ರೀಮತಿ ಮನಸಾ ಪ್ರವೀಣ್ ಭಟ್ ಉಪಸ್ಥಿತರಿದ್ದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮಾನ್ವಿ ವಹಿಸಿದರು. ಹಲವಾರು ಮಹೋನ್ನತ ಕವಿಗಳು ಸ್ವರಚಿತ ಕವನ ವಾಚನ ಮಾಡಿದರು. ಡಾ. ಎಂ ಪಿ ವರ್ಷ ಹಾಗೂ ಶ್ರೀ ಪಿ ವಿ ಪ್ರದೀಪ್ ಕುಮಾರ್ ಇವರು ಈ ಸಮಾರಂಭದಲ್ಲಿ ಸನ್ಮಾನಿಸಲ್ಪಟ್ಟರು. ತದನಂತರ ಡಾ. ವಾಣಿಶ್ರೀ ನೇತ್ರತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ಸಾಂಸ್ಕೃತಿಕ ಸಂಭ್ರಮ ನಡೆಯಿತು.
ಅಪರ್ಣ, ಅವನಿ ಕಿನ್ನಿಗೋಳಿ, ಅಶ್ವಿಜಾ ಉಡುಪ, ಸೃಜನ್ ಚಂದ್ರಮಂಡಲ, ಅಶುತೋಷ್ ಕಿನ್ನಿಗೋಳಿ, ಶೆಟ್ಟಿ ಧನ್ಯ ವಿಜಯ್, ಖುಷಿ ವಿ ಶೆಟ್ಟಿ, ಹರ್ಷಲ್ ಕೆ ರೈ ಒಷಿಯಲ್ ವಾಯಲ್ ಡಿ ಸೋಜಾ ಚಿನ್ಮಯ್ ಕುತ್ಯಾರ್, ಲತಾ, ಉಷಾ ಸುಧಾಕರನ್, ವಿಷ್ಣುಜಾ, ವಿಜಿತಾ ಕೇಶವನ್, ನಿಶಾ, ಅಸ್ಮಿತ್ ಎ ಜೆ ಮಂಗಳೂರು, ಆದ್ಯ ಅಶ್ವಿನ್, ಮಹಾಲಕ್ಷ್ಮಿ ರಾಜೇಂದ್ರ, ಶೋಭಾ ಕಾಳೆ, ಸದಾನಂದ ಶೆಟ್ಟಿ, ಕಿಶನ್ ಅಗ್ಗಿತ್ತಾಯ, ಸಾಕ್ಷಿ ಗುರುಪುರ, ಸಾನ್ವಿ ಗುರುಪುರ, ಆದ್ಯ ಡಿ ಎ ಕಾರ್ಕಳ, ನಿಧಿ, ಶಾರ್ವಿಲ್ ಕೆ ರೈ, ಅನ್ವಿತಾ ರಾವ್, ದೃತಿ ಎನ್ ಕುಲಾಲ್, ರಿತ್ವಿನ್ ಎನ್ ಕುಲಾಲ್, ಶ್ರೀವಲ್ಲಿ ಎಸ್ ಉಡುಪ, ಹೆಜಲ್ ಜೆ ವೈ, ಆದ್ಯ ಆರ್ ಮೂಲ್ಯ, ಅನನ್ಯ ಆರ್ ಮೂಲ್ಯ, ಹಿಮಾನಿ ಡಿ ಬೆಲ್ಮಣ್, ಅಭಿಜ್ಞಾ, ಮಿಲ್ಟೊನ್ ಸೇರ್ರ, ಮೇಲ್ವಿತಾ ಸೇರ್ರ, ಮುರಾರಿ ರಾವ್, ಪ್ರೀತಮ್ ದೇವಾಡಿಗ ಮುದ್ರಾಡಿ, ನಂದ ಕಿಶೋರ್ ಡಿ, ಸಿಂಧೂರ, ಅಹನಾ ಎಸ್ ರಾವ್, ಶ್ರೇಯಾ, ಧನ್ಯಶ್ರೀ, ಉಮಾವತಿ, ಲಕ್ಷ್ಮಿ ನಂದಾ, ನಂದನ, ನಿಧೀಶ್ ಕುಮಾರ್, ಸನುಷಾ ಸುನಿಲ್, ಸನುಷಾ ಸುಧಾಕರನ್, ಹರಿತಾ ಕುಮಾರಿ, ಗಣೇಶ್ ರಾವ್, ವೈಷ್ಣವಿ ಉಜಿರೆ, ಪ್ರಶಾಂತ್, ಗುರುಪ್ರಸಾದ್, ಪ್ರವೀಣ್, ಸಜೀಶ್, ನಿರೀಕ್ಷಾ ಶೆಟ್ಟಿ, ಸುಭಾಷಿಣಿ ಚಂದ್ರ, ಡಾ. ವಾಣಿಶ್ರೀ, ಗುರುರಾಜ್, ಸುಶ್ಮಿತಾ, ಶರಣ್ಯ, ಭಾಸ್ಕರ ಅಡೂರ್, ಹರೀಶ್ ಅಡೂರ್, ಸಮೃದ್ಧಿ ಮೊದಲಾದ ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರೆದರು.
ಡಾ. ವಾಣಿಶ್ರೀ ಕಾಸರಗೋಡು ನಿರೂಪಣೆ ಮಾಡುತ್ತಾ ಎಲ್ಲಾ ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಕನ್ನಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸಬೇಕು ಎಂದು ಹೇಳಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق