ಕುಣಿಗಲ್: ಕೆಎಸ್ ಆರ್ ಟಿಸಿ ಬಸ್ ಚಾಲಕ ರಸ್ತೆಯಲ್ಲಿ ಬಸ್ ನ್ನು ಹಂಪ್ ನಲ್ಲಿ ಅಜಾಗರೂಕತೆಯಿಂದ ಚಲಾಯಿಸದ ಕಾರಣ ನಿರ್ವಾಹಕನ ಕಾಲು ಮುರಿದ ಘಟನೆಯೊಂದು ತಾಲೂಕಿನ ಹಳೇಯ ರಾಷ್ಟ್ರೀಯ ಹೆದ್ದಾರಿ 48 ಗೊಟ್ಟಿಕೆರೆ ಸಮೀಪ ಶುಕ್ರವಾರ ನಡೆದಿದೆ.
ಕೋಲಾರ ವಿಭಾಗದ ಬಸ್ ನಿರ್ವಾಹಕ ಸಂಗಪ್ಪ ಹಕ್ಕಿ (45) ಕಾಲು ಮುರಿದುಕೊಂಡ ನಿರ್ವಾಹಕ.
ಶುಕ್ರವಾರ ಧರ್ಮಸ್ಥಳದಿಂದ ಹೊರಟ ಬಸ್ ಕುಣಿಗಲ್ ಮಾರ್ಗವಾಗಿ ಕೋಲಾರ ಕ್ಕೆ ತೆರಳುತ್ತಿತ್ತು. ಈ ವೇಳೆ ತಾಲೂಕಿನ ಗೊಟ್ಟಿಕೆರೆ ಬಳಿ ಚಾಲಕ ಮಹತೇಶ್ ಏಕಾಏಕಿ ಹಂಪ್ ಹಾರಿಸಿದ ಕಾರಣ ಬಸ್ ನಲ್ಲಿ ನಿಂತಿದ್ದ ಸಂಗಪ್ಪನ ಕಾಲಿನ ಮೂಳೆ ಮುರಿತಕ್ಕೊಳಗಾಗಿದೆ.
ಕೂಡಲೇ ಗಾಯಾಳುವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಯಿತು.
إرسال تعليق