ವಸಂತ ಗೌಡ ಕಾಯರ್‍ತಡ್ಕ ರವರಿಗೆ, ದಿ| ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ
ಕಾಂತಾವರ: ಗ್ರಾಮೀಣ ಪ್ರದೇಶದಲ್ಲಿ ಆಟ- ಕೂಟ, ಶಿಕ್ಷಣ ಶಿಬಿರ, ಬಣ್ಣಗಾರಿಕೆ ಕಮ್ಮಟ- ಹೀಗೆ ಯಕ್ಷಗಾನೀಯ ಚಟುವಟಿಕೆ ಕಲೆಗಾಗಿ, ಕಲಾವಿದನಿಗಾಗಿ, ಕಲಾಸೇವೆ ಗೈಯುತ್ತಾ ಬೆಳೆದ ಯಕ್ಷದೇಗುಲ ಕಾಂತಾವರದ 20ನೇ ವಾರ್ಷಿಕ ಯಕ್ಷೋಲ್ಲಾಸ 2022 ಮುಂದಿನ ಜುಲೈ 24ರಂದು ದಿನಪೂರ್ತಿ ನಡೆಯಲಿದೆ.
ಅಂದು ನಡೆಯುವ ಸಂಭ್ರಮದಲ್ಲಿ ಯಕ್ಷಗಾನ ಕ್ಷೇತ್ರದ ನಿವೃತ್ತ ಹಿರಿಯ ಕಲಾವಿದ ಡಾ| ಕೋಳ್ಯೂರು ರಾಮಚಂದ್ರ ರಾಯರಿಗೆ ಯಕ್ಷದೇಗುಲ ವಿಂಶತಿ ಪುರಸ್ಕಾರ, ಧರ್ಮಸ್ಥಳ ಮೇಳದ ವಸಂತ ಗೌಡ ಕಾಯರ್ತಡ್ಕ ಇವರಿಗೆ ದಿ| ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ ಹಾಗೂ ವಿಂಶತಿ ಯುವ ಪುರಸ್ಕಾರ ಸಾಣೂರು ಗಣೇಶ ಶೆಟ್ಟಿ ಯವರಿಗೆ ಪ್ರದಾನ ಮಾಡಲು ಸಂಸ್ಥೆಯ ತೀರ್ಪುಗಾರರ ಸಮಿತಿಯಿಂದ ತೀರ್ಮಾನಿಸಲಾಯಿತು ಎಂದು ಪ್ರಧಾನ ಕಾರ್ಯಾಧ್ಯಕ್ಷ ಮಹಾವೀರ ಪಾಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
إرسال تعليق