ಧರ್ಮತ್ತಡ್ಕ: ಬಾಡೂರು ಪೆರ್ಮುದೆ ಎ.ಎಲ್.ಪಿ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ ವಿಜೃಂಭಣೆಯಿಂದ, ವಿವಿಧ ಮನೋರಂಜನ ಕಾರ್ಯಕ್ರಮಗಳೊಂದಿಗೆ ಜರಗಿತು. ವಾರ್ಡು ಸದಸ್ಯೆ ಇರ್ಷಾನ ಇಸ್ಮಾಯಿಲ್, ಶಾಲಾ ಪ್ರಬಂಧಕರಾದ ಇ. ರವಿಶಂಕರ ಭಟ್, ಮಾಜಿ ವಾರ್ಡು ಸದಸ್ಯ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪೈವಳಿಕೆ ಗ್ರಾಮ ಪಂಚಾಯತು ಎಂ.ಕೆ. ಅಮೀರ್, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ ಎ, ಪಿ.ಟಿ.ಎ ಅಧ್ಯಕ್ಷರಾದ ಮೊಹಮ್ಮದಾಲಿ, ಎಂ.ಪಿ.ಟಿ.ಎ ಅಧ್ಯಕ್ಷರಾದ ಶ್ರೀಮತಿ ಚೇತನ, ಶಾಲಾ ಮುಖ್ಯೋಪಾಧ್ಯಾಯರಾದ ಸದಾಶಿವ ಕೆ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಾರ್ಡು ಸದಸ್ಯೆ ಇರ್ಷಾನ ಇಸ್ಮಾಯಿಲ್ ಉದ್ಘಾಟಿಸಿ ನವಾಗತ ಮಕ್ಕಳಿಗೆ ಕಲಿಕೋಪರಕರಣ ಕಿಟ್ ವಿತರಿಸಿ ಸ್ವಾಗತಿಸಿ ಶುಭಹಾರೈಸಿದರು. ಮಾಜಿ ವಾರ್ಡು ಸದಸ್ಯ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪೈವಳಿಕೆ ಗ್ರಾಮ ಪಂಚಾಯತು ಎಂ.ಕೆ.ಅಮೀರ್, ಶಾಲಾ ಪ್ರಬಂಧಕರಾದ ಇ. ರವಿಶಂಕರ ಭಟ್, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ ಎ, ಪಿ.ಟಿ.ಎ ಅಧ್ಯಕ್ಷರಾದ ಮೊಹಮ್ಮದಾಲಿ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಚೇತನ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಸದಾಶಿವ ಕೆ.ಕೆ ಸ್ವಾಗತಿಸಿದರು. ಸ್ಮಿತಾ ಟೀಚರ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಾಪಕರಾದ ಅಬ್ದುಲ್ ಮುನೀರ್ ವಂದಿಸಿದರು.
ಧನ್ಯವಾದಗಳು
ردحذفإرسال تعليق