ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಶಿರ್ಲಾಲು ಗ್ರಾಮದ ಪಿತ್ತಿಲು ಮನೆ ನಿವಾಸಿ ಸುನಂದಮ್ಮ ಶಿರ್ಲಾಲು (79) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ ಮೂರು ಮಂದಿ ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಜೈನಧರ್ಮದ ಮರ್ಮವನ್ನರಿತ ಅವರು ರತ್ನತ್ರಯ ಧರ್ಮ ಹಾಗೂ ವ್ರತ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಅನೇಕ ನೋಂಪಿಗಳನ್ನು ಮತ್ತು ಆರಾಧನೆಗಳನ್ನು ಮಾಡಿ ಪುಣ್ಯ ಸಂಚಯ ಮಾಡಿದ್ದಾರೆ. ತ್ಯಾಗಿಗಳ ಸೇವೆಯಲ್ಲಿ ಪರಿಣತರು.
ಅನೇಕ ಬಸದಿಗಳು ಹಾಗೂ ಉತ್ತರ ಭಾರತದ ಸಮ್ಮೇದಗಿರಿ, ಶೀಖರ್ಜಿ, ಪಾವಾಪುರಿ ಮೊದಲಾದ ತೀರ್ಥಕ್ಷೇತ್ರಗಳ ದರ್ಶನ ಹಲವು ಬಾರಿ ಮಾಡಿದ್ದಾರೆ.
ದೇವರ ಪೂಜೆ, ಮುನಿಗಳ ಸೇವೆ, ಸ್ವಾಧ್ಯಾಯ, ಜಪ, ತಪ, ಧ್ಯಾನದಲ್ಲಿ ಸದಾ ನಿರತರಾಗಿ ಆದರ್ಶ ಶ್ರಾವಿಕೆಯಾಗಿ ಅವರು ಚಿರಪರಿಚಿತರು.
إرسال تعليق