ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ರ 2021 ಮತ್ತು 2022ರ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮ ಗುರುವಾರ (ಮೇ 12) ಸರ್ಕಾರಿ ಪ್ರೌಢಶಾಲೆ ನಯನಾಡು ಇಲ್ಲಿ ಜರುಗಿತು. ಪ್ರವೀಣ್ ಕ್ರಾಸ್ತಾ, ಅಧ್ಯಕ್ಷರು ಗೆಳೆಯರ ಬಳಗ ನಯನಾಡು ಇವರು ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಉಜಿರೆಯ ಬೋಧಿ ಆಪ್ತಸಮಾಲೋಚನ ಮತ್ತು ಕ್ಷೇಮ ಕೇಂದ್ರದ ಆಪ್ತ ಸಮಾಲೋಚಕರಾದ ಸ್ಮಿತೇಶ್ ಬಾರ್ಯ ಇವರು ಆಗಮಿಸಿದ್ದು "ರಂಗಕಲೆ ಕುರಿತು ಕಾರ್ಯಾಗಾರ" ಎಂಬ ವಿಷಯದ ಬಗ್ಗೆ ವಿವರಿಸಿ ತಮ್ಮ ಮಾತಿನ ಚಾಕಚಕ್ಯತೆಯಿಂದ ವಿದ್ಯಾರ್ಥಿಗಳಾದ ನಮ್ಮಲ್ಲಿ ಹೊಸ ಚೈತನ್ಯ ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ನಯನಾಡು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ವಿದ್ಯಾಶ್ರೀ, ನಯನಾಡು ಒಕ್ಕೂಟ ಗೆಳೆಯರ ಬಳಗದ ಮಾಜಿ ಅದ್ಯಕ್ಷರಾದ ರಮೇಶ್ ಪೂಜಾರಿ, ಶಾಲೆಯ ಎಸ್‌ಡಿಎಂಸಿ ಸದಸ್ಯ ಜಯರಾಮ್ ಮಡಿವಾಳ, ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯ ನಿಕಟ ಪೂರ್ವ ಪ್ರಾಂಶುಪಾಲರಾದ ಗಣಪತಿ ಭಟ್ ಕುಳಮರ್ವ ಮತ್ತು ಸರಕಾರಿ ಪದವಿಪೂರ್ವ ಕಾಲೇಜು ನಡ ಇಲ್ಲಿನ ಉಪನ್ಯಾಸಕಿ ವಸಂತಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿ ಯಶಸ್ವಿನಿ ಸ್ವಾಗತಿಸಿ, ಶಿಬಿರಾರ್ಥಿ ಕುಸುಮಾವತಿ ನಿರೂಪಿಸಿ, ಶಿಬಿರಾರ್ಥಿ ಗ್ರಹಿತ ಇವರು ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق