ಕಾಸರಗೋಡು: ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಶಾಸನತಂತ್ರದ ಮುಳ್ಳೇರಿಯ ಮಂಡಲಾಂತರ್ಗತ ಕಾಸರಗೋಡು ವಲಯದ ಮೇ ತಿಂಗಳ ಮಾಸಿಕ ಸಭೆಯು ದಿನಾಂಕ 01/05/2022 ರಂದು ಭಾನುವಾರ ಕಾಸರಗೋಡು ನಗರದ ಹವ್ಯಕ ಸಭಾಭವನದಲ್ಲಿ ವಲಯಾಧ್ಯಕ್ಷ ಮನ್ನಿಪ್ಪಾಡಿ ಮಹಾಲಿಂಗೇಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು. ಬಳಿಕ ಮಹಾಮಂಡಲದಿಂದ ಬಂದ ಕಾರ್ಯಸೂಚಿಯನ್ನು ವಾಚಿಸಲಾಯಿತು.
ದಿನಾಂಕ 9.4.22ರಂದು ಪ್ಲವ ಸಂವತ್ಸರದ ಬೆಳೆ ಸಮರ್ಪಣೆಯ ಪೂಗಪೂಜೆ ಹೊಸನಗರದಲ್ಲಿ ನಡೆದಿದ್ದು ಪ್ರಸಾದ ಮಂತ್ರಾಕ್ಷತೆಯನ್ನು ಸಮಸ್ತ ಶಿಷ್ಯರಿಗೆ ತಲುಪಲು ಎಲ್ಲಾ ಘಟಕಗಳಿಗೆ ನೀಡಲಾಯಿತು.
ದಿನಾಂಕ 25/03/2022ರಂದು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಮಧೂರು ಇದರ ನವೀಕರಣದಂಗವಾಗಿ ನಡೆಯುತ್ತಿದ್ದ 48 ದಿನಗಳ ಮಂಡಲ ಸಂಕೀರ್ತನೋತ್ಸವದ ಪ್ರಯುಕ್ತ ಒಂದು ಗಂಟೆಯ ಭಜನಾ ಸೇವೆ ಶ್ರೀಮತಿ ಪ್ರೇಮಲತಾ ಸಿ ಮನ್ನಿಪ್ಪಾಡಿ ನೇತೃತ್ವದ ಶ್ರೀಭಾರತೀ ಭಜನಾ ಸಂಘ ಕಾಸರಗೋಡು ಇದರ ಸದಸ್ಯರಿಂದ ನಡೆದು ಕೃತಜ್ಞತಾ ಪತ್ರ ದೇವಳ ಸಮಿತಿಯಿಂದ ಪಡೆದ ಬಗ್ಗೆ ಮಾಹಿತಿ ವಲಯಾಧ್ಯಕ್ಷರು ನೀಡಿದರು.
ಬದಿಯಡ್ಕ ಭಾರತೀ ವಿದ್ಯಾಪೀಠದಲ್ಲಿ ನಡೆದ ವಿವಿವಿ ಪಾಕಲೋಕದ ಯಶಸ್ವಿಯ ಅವಲೋಕನ ಮಾಡಲಾಯಿತು.
ಕಾಸರಗೋಡು ನಗರ ಘಟಕದ ಗುರಿಕ್ಕಾರರಾದ ಶ್ರೀ ಗೋಪಾಲಕೃಷ್ಣ ಭಟ್ ಶಿರಂತಡ್ಕ ಅವರು ವಿಷ್ಣುಗುಪ್ತ ವಿಶ್ವ ವಿದ್ಯಾಪೀಠಕ್ಕೆ ನೀಡಿದ ದೇಣಿಗೆ ರೂಪಾಯಿ ಒಂದು ಲಕ್ಷದ ಚೆಕ್ಕನ್ನು ಹಿರಿಯ ಗುರಿಕ್ಕಾರರಾದ ಶ್ರೀಯುತ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅವರಿಗೆ ಹಸ್ತಾಂತರಿಸಲಾಯಿತು.
ಇತ್ತೀಚೆಗೆ ನಿಧನರಾದ ವಲಯದ ಬಿಂದು ಸಿಂಧು ಪ್ರಧಾನ ಶ್ರೀ ಗೀತಗೋವಿಂದ ಅವರ ಸಂಬಂಧಿ ಶ್ರೀಮತಿ ಶಂಕರಿ ಅಮ್ಮ ಅವರ ಸದ್ಗತಿಗಾಗಿ ಶ್ರೀ ರಾಮತಾರಕ ಮಂತ್ರ ಜಪ ಗೈದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರಾಮತಾರಕ ಜಪ, ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯಗೊಂಡಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق