ಮಂಗಳೂರು: ಸಂಗೀತ, ಸಾಹಿತ್ಯ ಮತ್ತು ಆರೋಗ್ಯ ಇವೆಲ್ಲವೂ ಒಂದಕ್ಕೊಂದು ಅವಿನಾವಭಾವ ಸಂಬಂಧವಿದೆ. ಎಷ್ಟೋ ಬಾರಿ ವೈದ್ಯರು ಕೈಚೆಲ್ಲಿದ ಬಳಿಕ, ರೋಗಿಗಳು ಅವರಿಗಿಷ್ಟವಾದ ಸಂಗೀತಕ್ಕೆ ಸ್ಪಂದಿಸಿದ ಉದಾಹರಣೆ ನಾವು ನೋಡಿದ್ದೇವೆ. ಸಂಗೀತಕ್ಕೆ ಮಾಂತ್ರಿಕ ಶಕ್ತಿ ಇದೆ. ಮೆದುಳು, ಮನಸ್ಸು ಮತ್ತು ಹೃದಯವನ್ನು ತಟ್ಟುವ ಸಂಗೀತದಿಂದ ರೋಗಿಗಳು ಮತ್ತಷ್ಟು ಉಲ್ಲಸಿತನಾಗಿ ಬೇಗನೆ ಗುಣಮುಖವಾಗುವ ಸಾಧ್ಯತೆ ಇದೆ. ಅದೇ ರೀತಿ ಸಾಹಿತ್ಯ ಕೃಷಿಯಿಂದ ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯ ಹೆಚ್ಚುವ ಎಲ್ಲಾ ಸಾಧ್ಯತೆ ಇದೆ. ಸಂಗೀತ ಸಾಹಿತ್ಯ ಆಲಿಸುವಿಕೆಯಿಂದ ಮನಸ್ಸು ನಿರಾಳವಾಗಿ ಮಾನಸಿಕ ಉಲ್ಲಸಿತನಾಗಿ ಆರೋಗ್ಯ ಪೂರ್ಣನಾಗುತ್ತಾನೆಂದು ಖ್ಯಾತ ವೈದ್ಯ ಡಾ. ಕಿಶನ್ ರಾವ್ ಬಾಳಿಲ ಅಭಿಪ್ರಾಯಪಟ್ಟರು.
ನಗರದ ಬೆಂದೂರ್ ವೆಲ್ ನಲ್ಲಿರುವ ಮಾಯಾ ಇಂಟರ್ ನ್ಯಾಷನಲ್ ಹೊಟೇಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ, ಲಯನ್ಸ್ ಕ್ಲಬ್ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇವರುಗಳ ಜಂಟಿ ಆಶ್ರಯದಲ್ಲಿ ಬುಧವಾರ (ಮೇ 11) ನಡೆದ ಸಂಗೀತ, ಸಾಹಿತ್ಯ ಮತ್ತು ಆರೋಗ್ಯ ಎಂಬ ವಿಚಾರ ಗೋಷ್ಠಿಯಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಡಾ|| ಕಿಶನ್ ರಾವ್ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಬಿ. ಸತೀಶ್ ರೈ ಮಾತನಾಡಿ, ಇಂದಿನ ಒತ್ತಡದ ಜೀವನದ ಸನ್ನಿವೇಶದಲ್ಲಿ ಸಂಗೀತ ಮತ್ತು ಸಾಹಿತ್ಯ ಚಟುವಟಿಕೆ ಅತೀ ಅವಶ್ಯಕ ಮತ್ತು ಆರೋಗ್ಯ ಪೂರಕ ಎಂದು ಅಭಿಪ್ರಾಯ ಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಡಾ|| ಮಂಜುನಾಥ್ ರೇವಣಕರ್ ಅವರು ಮಾತನಾಡಿ, ಕನ್ನಡ ಸಾಹಿತ್ಯವನ್ನು ಮನೆ ಮನೆಗೆ ಪಸರಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ, ಜನರು ತಮ್ಮ ಯಾಂತ್ರಿಕ ಬದುಕಿನ ಏಕತಾನತೆಯನ್ನು ಹೋಗಿಸಲು ಹೆಚ್ಚು ಹೆಚ್ಚು ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆನೀಡಿದರು.
ಕಸಾಪದ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಅವರು ಸ್ವಾಗತ ಭಾಷಣ ಮಾಡಿದರು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ವಂದನಾರ್ಪಣೆಗೈದರು. ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಪ್ರಾರ್ಥನೆ ಮಾಡಿದರು.
ಮುರಲೀಧರ ರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಸಾಪ ಮಂಗಳೂರು ಘಟಕದ ಕೋಶಾಧಿಕಾರಿ ಸುಬ್ರಾಯ ಭಟ್, ಪದಾಧಿಕಾರಿಗಳಾದ ಕೃಷ್ಣಪ್ಪ ನಾಯಕ್, ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ಶ್ರೀಮತಿ ಸುಖಲಾಕ್ಷಿ ಸುವರ್ಣ, ಡಾ|| ಮೀನಾಕ್ಷಿ ರಾಮಚಂದ್ರ, ತಿರುಮಲೇಶ್ವರ ಭಟ್ ಮತ್ತು ಲಯನ್ಸ್ ಕ್ಲಬ್ ನ ಸದಸ್ಯರಾದ ಸುಪ್ರಿತಾ ಜಿ. ಶೆಟ್ಟಿ, ಡೆನ್ನಿಸ್ ರೋಡ್ರಿಗಸ್, ಗುರುಪ್ರೀತ್ ಆಳ್ವ, ಜಯರಾಜ್ ಪ್ರಕಾಶ್, ಗೋವರ್ಧನ್ ಕೆ. ಶೆಟ್ಟಿ ಮುಂತಾದವರು ಭಾಗವಹಿಸಿದ್ದರು. ಸುಮಾರು 50 ಮಂದಿ ಸಾಹಿತ್ಯಾಸಕ್ತರು ಈ ಕಾರ್ಯಕ್ರಮದ ಪ್ರಯೋಜನ ಪಡೆದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق