ಪುಂಜಾಲಕಟ್ಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 &2 ರ 2021 ಮತ್ತು 22ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಮೇ 10 ರಂದು ಸರ್ಕಾರಿ ಪ್ರೌಢಶಾಲೆ ನಯನಾಡು ಇಲ್ಲಿ ಜರಗಿತು.
ಶ್ರೀಮತಿ ಹರ್ಷಿಣಿ ಎಂ. ಅಧ್ಯಕ್ಷರು ಗ್ರಾಮ ಪಂಚಾಯಿತಿ ಪಿಲಾತಬೆಟ್ಟು ಇವರು ಶಿಬಿರವನ್ನು ಉದ್ಘಾಟಿಸಿ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರಿಗೆ ಕಾನೂನು, ನಿಯಮಗಳನ್ನು ಅರಿವು ಮೂಡಿಸಿದರು.
ರಮೇಶ ಕುಡುಮೇರು ನಿಕಟಪೂರ್ವ ಸದಸ್ಯರು ತಾಲೂಕ್ ಪಂಚಾಯತ್ ಬಂಟ್ವಾಳ, ಹರೀಂದ್ರ ಡಿ ಪೈ, ಉದ್ಯಮಿಗಳು ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರಿ ನಯನಾಡು, ಜೋಯೆಲ್ ಲೋಬೊ ಮುಖ್ಯೋಪಾಧ್ಯಾಯರು ಸ.ಪ್ರೌ. ಶಾಲೆ ನಯನಾಡು, ಹರೀಶ್ ಪೂಜಾರಿ ಅಧ್ಯಕ್ಷರು ಸ್ವಾಗತ ಸಮಿತಿ ರಾಷ್ಟ್ರೀಯ ಸೇವಾ ಯೋಜನೆ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ಹಳ್ಳಿಮನೆ ಹೈದರಾಲಿ ಅಧ್ಯಕ್ಷರು ಶಿಕ್ಷಕ-ರಕ್ಷಕ ಸಂಘ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ಶ್ರೀಲಕ್ಷ್ಮೀನಾರಾಯಣ ಹೆಗ್ಗಡೆ ಗ್ರಾಮ ಪಂಚಾಯಿತಿ ಪಿಲಾತಬೆಟ್ಟು, ಮಿಥುನ್ ಪ್ರಭು ಶಾಲಾ ವಿದ್ಯಾಭಿಮಾನಿ ನೇರಳಕಟ್ಟೆ ಹಾಗೂ ಶಿಬಿರಾಧಿಕಾರಿ ಪ್ರೊ. ರಾಜೇಶ್ವರಿ ಎಚ್ ಎಸ್ ಮತ್ತು ಪ್ರೊ.ಸಂತೋಷ್ ಪ್ರಭು ಎಂ, ಕಾಲೇಜಿನ ಉಪನ್ಯಾಸಕ ವರ್ಗ, ಶಿಬಿರದ ಕಾರ್ಯದರ್ಶಿಗಳಾದ ಕಿರಣ್ ಕುಮಾರ್, ರಾಜೇಶ್ವರಿ, ಮಧುರ, ಪ್ರಮೋದ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಪ್ರೊ. ಸಂತೋಷ್ ಪ್ರಭು ಎಂ. ಇವರು ಪ್ರಸ್ತಾಪಿಸಿ, ಸ್ವಾಗತಿಸಿದರು. ಶಿಬಿರಾರ್ಥಿ ಕೆ.ಸುರಕ್ಷಾ ನಿರೂಪಿಸಿ, ಸ್ಮಿತಾ ವಂದಿಸಿದರು.
ಶೈಕ್ಷಣಿಕ ಕಾರ್ಯಕ್ರಮ:
ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮ ನಯನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ ಡಾ.ಟಿ. ಕೆ.ಶರತ್ ಕುಮಾರ್ ಪ್ರಾಂಶುಪಾಲರು, ಸ.ಪ್ರ.ದ. ಕಾಲೇಜು ಪುಂಜಾಲಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ದಿನೇಶ್ ಹೊಳ್ಳ, ಸಹ್ಯಾದ್ರಿ ಸಂಚಾಲಕರು ಮತ್ತು ಪರಿಸರವಾದಿಗಳು ಇವರು ಆಗಮಿಸಿದ್ದು, ಪ್ರಕೃತಿ ಮತ್ತು ನಾವು ಎಂಬ ವಿಷಯದಲ್ಲಿ ಪ್ರಕೃತಿ ಮತ್ತು ನಮಗೂ ಇರುವ ಸಂಬಂಧವನ್ನು ಸರಳವಾಗಿ ವಿಸ್ತರಿಸಿದರು.
ಈ ಕಾರ್ಯಕ್ರಮದಲ್ಲಿ ಡಾ.ವಿಶಾಲ್ ಪಿಂಟೋ ಹಾಗೂ ಪ್ರೊ.ಖಂಡೋಜಿ ಲಮಾಣಿ, ಸಹಾಯಕ ಪ್ರಾಧ್ಯಾಪಕರು ಸ.ಪ್ರ.ದ.ಕಾಲೇಜು ಪುಂಜಾಲಕಟ್ಟೆ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶಿಬಿರಾರ್ಥಿ ರಶ್ಮಿತಾ ಸ್ವಾಗತಿಸಿ, ಶಿಬಿರಾರ್ಥಿ ಚಂದ್ರಿಕಾ ನಿರೂಪಿಸಿ, ಶಿಬಿರಾರ್ಥಿ ಮನೋಜ್ ಸಿ ಇವರು ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق