ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಳ್ಳಾಲ ಕಸಾಪದಿಂದ ಮೇ 15ರಂದು ಕುತ್ತಾರಿನಲ್ಲಿ ‘ಜಾನಪದ ವೈಭವ’

ಉಳ್ಳಾಲ ಕಸಾಪದಿಂದ ಮೇ 15ರಂದು ಕುತ್ತಾರಿನಲ್ಲಿ ‘ಜಾನಪದ ವೈಭವ’



ಮುಡಿಪು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಮೇ 15 ಭಾನುವಾರದಂದು ಸಂಜೆ ಮೂರರಿಂದ ಕುತ್ತಾರಿನ ರಾಜರಾಜೇಶ್ವರಿ  ದೇವಸ್ಥಾನದ ಸಭಾಂಗಣದಲ್ಲಿ ಜಾನಪದ ವೈಭವ 2022 ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಜಾನಪದ ಕುಣಿತಗಳ ಕುರಿತು ಅರಿವು ಕಾರ್ಯಕ್ರಮ, ಜಿಲ್ಲಾ ಮಟ್ಟದ ಸಮೂಹ ಜಾನಪದ ನೃತ್ಯ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.


ಸಂಜೆ 6.30 ರಿಂದ ನಡೆಯುವ ಅರಿವು ಕಾರ್ಯಕ್ರಮದಲ್ಲಿ ಜಾನಪದ ಕುಣಿತಗಳ ಸ್ವರೂಪ ಮತ್ತು ಅರ್ಥ ಎಂಬ ವಿಷಂiÀiದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ, ಜಾನಪದ ವಿದ್ವಾಂಸ ಪ್ರೊ. ಅಭಯಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಲಿದ್ದಾರೆ.


ಬಳಿಕ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದ.ಕ ಜಿಲ್ಲಾ ಕಸಾಪ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜರಾಜೇಶ್ವರಿ ದೇವಸ್ಥಾನದ ಸಮಿತಿ ಅಧ್ಯಕ್ಷರಾದ ವಿವೇಕಾನಂದ ಇವರು ದೀಪ ಪ್ರಜ್ವಲನ ಮಾಡಲಿದ್ದು ಕಲಾಪೋಷಕ, ಸಂಘಟಕ ಲಯನ್ ಪ್ರಸಾದ್ ರೈ ಕಲ್ಲಿಮಾರು, ಕರ್ನಾಟಕ ಸರಕಾರದ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ಕಸಾಪ ಕಾರ್ಯದರ್ಶಿಗಳಾದ ರವೀಂದ್ರ ರೈ ಕಲ್ಲಿಮಾರು, ಎಡ್ವರ್ಡ್ ಲೋಬೋ, ಕೋಶಾಧಿಕಾರಿ ಲಯನ್ ಚಂದ್ರಹಾಸ ಶೆಟ್ಟಿ, ಕಾರ್ಯಕ್ರಮ ಸಂಚಾಲಕಿ ಕಸಾಪ ಅಂಬ್ಲಮೊಗರು ಪ್ರತಿನಿಧಿ ಕುಸುಮ ಪ್ರಶಾಂತ್ ಉಡುಪ ಮತ್ತಿತರರು ಭಾಗವಹಿಸಿಲಿದ್ದಾರೆ.


ಅಪರಾಹ್ನ ಮೂರು ಗಂಟೆಯಿಂದ ಜಿಲ್ಲಾ ಮಟ್ಟದ ಜಾನಪದ ನೃತ್ಯ ಸ್ಪರ್ಧೆ ನಡೆಯಲಿದ್ದು ವಿಜೇತರಿಗೆ ಪ್ರಥಮ ರೂ.8000, ದ್ವಿತೀಯ ರೂ 6000 ಹಾಗೂ ತೃತೀಯ ರೂ. 4000 ನಗದು ಮತ್ತು ಪ್ರಶಸ್ತಿ ಫಲಕ, ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಕಸಾಪ ಉಳ್ಳಾಲ ಘಟಕದ ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم