ನವದೆಹಲಿ: ಶೀಘ್ರವೇ ಗೃಹ ಸಾಲ ಬಡ್ಡಿ ದರ ಏರಿಕೆಯಾಗಿದ್ದು, ದೇಶದ ಜನತೆಗೆ ಬಿಗ್ ಶಾಕ್ ನೀಡಿದೆ.
ಬ್ಯಾಂಕ್ ಠೇವಣಿಗಳ ದರ ಏರಿಕೆಯಾಗುವ ರೀತಿಯಲ್ಲೇ ಗೃಹ ಸಾಲದ ಬಡ್ಡಿದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಗೃಹ ಸಾಲವನ್ನು ಆರಂಭಿಕ ಹಂತದಲ್ಲಿ 5 ಮೂಲಾಂಶಗಳಷ್ಟು ಹೆಚ್ಚಳ ಮಾಡುವ ನಿರೀಕ್ಷೆಯಿದೆ ಎಂಬುದಾಗಿ ಬ್ಯಾಂಕ್ ನ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಗೃಹ ಸಾಲ ಸಾಮಾನ್ಯವಾಗಿ ರೆಪೋ ದರವನ್ನು ಅವಲಂಬಿಸಿರುತ್ತದೆ. ಸದ್ಯಕ್ಕೆ ಆರ್ ಬಿ ಐ ರೆಪೋದರ ಏರಿಕೆ ಮಾಡಿಲ್ಲ. ಜೂನ್ ವೇಳೆಗೆ ಬದಲಾವಣೆ ಆಗುವ ಸಾಧ್ಯತೆ ಇದ್ದು, ಆಗ ಗೃಹ ಸಾಲದ ಬಡ್ಡಿದರ ಕೂಡ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Post a Comment