ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಸಿಡಿಲು ಬಡಿದು 14 ಕುರಿಗಳು ಮತ್ತು ಒಂದು ಕುದುರೆ ಸಾವನ್ನಪ್ಪಿದ ಘಟನೆಯೊಂದು ಕುಂದಗೋಳ ತಾಲೂಕಿನ ಸಿದ್ಯಾವನೂರು ಗ್ರಾಮದಲ್ಲಿ ನಡೆದಿದೆ.
ಗುಡುಗು ಸಹಿತ ಭಾರಿ ಮಳೆ ಹಿನ್ನೆಲೆ ಮರದ ಬಳಿ ನಿಂತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಹುಬ್ಬಳ್ಳಿಯಲ್ಲಿ 14 ಕುರಿ ಹಾಗೂ ಒಂದು ಕುದುರೆ ಸಾವು
ಗ್ರಾಮದ ವಿಠಲ ಲಟ್ಟಣ್ಣವರಿಗೆ ಸೇರಿದ ಕುರಿಗಳಾಗಿದ್ದು, ಇವರು ಊರೂರು ಸುತ್ತುತ್ತಾ ಜೀವನ ಸಾಗಿಸುವ ಸಂಚಾರಿ ಕುರಿಗಾಹಿಗಳಾಗಿದ್ದು, ಈ ಆಘಾತದಿಂದ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
Post a Comment