ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿಗೆ ಹೆಣ್ಣು ಮಗುವಿನ ಜನನವಾಗಿದೆ.ಈ ಬಗ್ಗೆ ಸ್ವತಃ ಅವರು ಸೋಶಿಯಲ್ ಮೀಡಿಯಾ ದಲ್ಲಿ ಸಂತಸದ ವಿಚಾರ ಶೇರ್ ಮಾಡಿದ್ದಾರೆ. ಪತ್ನಿ ಜೊತೆಗಿನ ಫೋಟೋ ಆಪ್ ಲೋಡ್ ಮಾಡಿ ರಿಷಬ್ 'ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ. ತಾಯಿ-ಮಗು ಆರೋಗ್ಯವಾಗಿದೆ' ಎಂದಿದ್ದಾರೆ.
ಪ್ರಗತಿ ಮತ್ತು ರಿಷಬ್ ಗೆ ಇದು ಎರಡನೇ ಮಗು. ದಂಪತಿಗೆ ಈಗಾಗಲೇ ಗಂಡು ಮಗುವೊಂದಿದೆ. ಇದೀಗ ಹೆಣ್ಣು ಮಗುವಿನ ಆಗಮನವಾದ ಖುಷಿಯಲ್ಲಿದ್ದಾರೆ.
إرسال تعليق