ಬೆಂಗಳೂರು: ಕೋಳಿ ಆಹಾರ ಬೆಲೆ ಹೆಚ್ಚಳವಾಗಿದ್ದು, ಇದರ ಪರಿಣಾಮ ಕೋಳಿ ಮಾಂಸದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಬೇಸಿಗೆಯಲ್ಲಿ ಉತ್ಪಾದನೆ ಕಡಿಮೆ ಇದ್ದು, ಇದೇ ವೇಳೆ ಕೋಳಿ ಆಹಾರ ವಸ್ತುಗಳ ಬೆಲೆಯಲ್ಲೂ ಶೇ.25 ರಷ್ಟು ಏರಿಕೆಯಾಗಿದೆ. ಜೊತೆಗೆ ಇಂಧನ ಬೆಲೆ ಏರಿಕೆಯಿಂದಾಗಿ ಸಾಗಾಟ ದರವೂ ಹೆಚ್ಚಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ ಕೋಳಿ ಮಾಂಸದ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ.
ಬ್ರಾಯ್ಲರ್ ಕೋಳಿ ಕೆಜಿಗೆ 125 ರೂ. ಇದ್ದರೆ, ಸ್ಕಿನ್ ಔಟ್ ಕೋಳಿ ಮಾಂಸ ಕೆ.ಜಿಗೆ 180-200 ರೂ. ಇದೆ. ವಿತ್ ಸ್ಕಿನ್ ಕೋಳಿ ಮಾಂಸದ ಬೆಲೆ 250 ರೂ. ತಲುಪಿದೆ. ನಾಟಿ ಕೋಳಿ ಕೆಜಿಗೆ 350 ರೂ. ಇದೆ.
إرسال تعليق