ಮಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಅವರ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಮುಂಗಾರು ಮಳೆಯಂತಹ ಸಾರ್ವಕಾಲಿಕ ಅದ್ಭುತ ಆಲ್ಬಮ್ ಅನ್ನು ನೀಡಿದ ಈ ಸಂಗೀತ ಮಾಂತ್ರಿಕ ಇದೀಗ ಸದ್ದಿಲ್ಲದೇ ತುಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜತೆಗೆ ಹಿರಿಯ ರಂಗಕರ್ಮಿ, ಗಾಯಕಿ ಬಿ. ಜಯಶ್ರೀ ಕೂಡ ತುಳು ಸಿನೆಮಾಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಈ ಎರಡೂ ಪ್ರತಿಭೆಗಳನ್ನು ಕೋಸ್ಟಲ್‌ವುಡ್‌ಗೆ ಕರೆ ತರುತ್ತಿರುವವರು ಪ್ರತಿಭಾನ್ವಿತ ನಿರ್ದೇಶಕ ವೀರೇಂದ್ರ ಶೆಟ್ಟಿ. ಈ ಇಬ್ಬರು ದೈತ್ಯರು ನಟಿಸುತ್ತಿರುವ ಸಿನೆಮಾ “ಮಗನೇ ಮಹಿಷ”
ಈಗಾಗಲೇ 'ಮಗನೆ ಮಹಿಷ' ಕಳೆದ ವಾರ ಬಿಡುಗಡೆ ಮಾಡಿದ ತನ್ನ ಫಸ್ಟ್ ಲುಕ್ ಪೋಸ್ಟರಿನಿಂದ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದು ಈ ವಾರ ಮನೋಮೂರ್ತಿ ಅವರು ಚಿತ್ರಕ್ಕೆ ಸಂಗೀತ ನೀಡಿರುವುದನ್ನು ಬಹಿರಂಗಪಡಿಸಿದೆ. ಜತೆಗೆ ಬಿ ಜಯಶ್ರೀ ಅವರ ಅದ್ಭುತ ಕಂಠ ‘ಮಗನೆ ಮಹಿಷ’ ಪಾಲಿಗೆ ಒದಗಿ ಬಂದಿದೆ. ಈ ಮೂಲಕ ‘ಮಗನೆ ಮಹಿಷ’ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق