ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಪನ್ಮೂಲಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಡಾ. ಚೂಂತಾರು

ಸಂಪನ್ಮೂಲಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಡಾ. ಚೂಂತಾರು



ಮಂಗಳೂರು: ರಾಷ್ಟ್ರದ ಮಾನವ ಸಂಪನ್ಮೂಲಗಳು ಮತ್ತು ಆಸ್ತಿಪಾಸ್ತಿಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಮೊದಲ ಆದ್ಯತೆ ಆಗಿರುತ್ತದೆ. ಅದೇ ರೀತಿ ಮಾನವ ನಿರ್ಮಿತ ದುರಂತಗಳು ಮತ್ತು ನೈಸರ್ಗಿಕ ದುರಂತಗಳಾದಾಗ ರಾಷ್ಟ್ರೀಯ ಸಂಪನ್ಮೂಲ ಗಳನ್ನು ರಕ್ಷಿಸುವ ವಿಶೇಷ ಹೊಣೆಗಾರಿಕೆ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ತಂಡಕ್ಕೆ ಇರುತ್ತದೆ. ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿಯೂ ರಾಷ್ಟ್ರದ ಸಂಪತ್ತು ಮತ್ತು ಮಾನವರ ಜೀವ ರಕ್ಷಣೆ ಮಾಡುವ ಹೊಣೆಗಾರಿಕೆ ಮತ್ತು ರೋಗ ತಡೆಗಟ್ಟುವ ವಿಶೇಷ ಜವಾಬ್ದಾರಿ ಪೌರರಕ್ಷಣಾ ತಂಡದ ಕಾರ‍್ಯಕರ್ತರಿಗೆ ಹಾಗೂ ಗೃಹರಕ್ಷಕರಿಗೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಹಾಗೂ ಪೌರರಕ್ಷಣಾ ತಂಡದ ಮುಖ್ಯಪಾಲಕರಾದ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.

ಶುಕ್ರವಾರ (ಮಾ.4) ನಗರದ ಮೇರಿಹಿಲ್‌ನಲ್ಲಿರುವ ಗೃಹರಕ್ಷಕ ದಳದ ಕಛೇರಿಯಲ್ಲಿ 51ನೇ ರಾಷ್ಟ್ರೀಯ ಸುರಕ್ಷಾ ದಿನಾಚರಣೆ ಅಂಗವಾಗಿ “ಸುರಕ್ಷಾ ಪ್ರತಿಜ್ಞಾ ವಿಧಿ” ಕಾರ‍್ಯಕ್ರಮ ನಡೆಯಿತು.

ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಚೂಂತಾರು ಪ್ರತಿಜ್ಞಾ ವಿಧಿ ಬೋಧಿಸಿದರು. ಕಛೇರಿ ಅಧೀಕ್ಷಕ ರತ್ನಾಕರ್, ಪ್ರಥಮ ದರ್ಜೆ ಸಹಾಕಿ ಅನಿತಾ, ಮೀನಾಕ್ಷಿ ಈ ಸಂದರ್ಭದಲ್ಲಿ ಹಾಜರಿದ್ದರು ಹಾಗೂ ಗೃಹರಕ್ಷಕರಾದ ದಿವಾಕರ್, ದುಷ್ಯಂತ್ ರೈ. ಜಯಲಕ್ಷ್ಮಿ, ಸುಲೋಚನ ಮತ್ತು ಪೌರರಕ್ಷಣಾ ಪಡೆಯ ಕಾರ್ಯಕರ್ತರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم