ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀವಲ್ಲಿ ಹಾಡಿಗೆ ಕುಣಿದ ತಾಯಿ ಮಗಳ ವಿಡಿಯೋ ವೈರಲ್

ಶ್ರೀವಲ್ಲಿ ಹಾಡಿಗೆ ಕುಣಿದ ತಾಯಿ ಮಗಳ ವಿಡಿಯೋ ವೈರಲ್

 


ಬೆಂಗಳೂರು: ಈಗಾಗಲೇ ಎಲ್ಲೆಡೆ ವೈರಲ್ ಆಗುತ್ತಿರುವ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಭಾರತದಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿದೆ.

ಸಿನಿಮಾದ ರೋಚಕ ಸಂಭಾಷಣೆಗಳು ಮತ್ತು ಆಕರ್ಷಕ ಹಾಡುಗಳಿಂದ ಎಲ್ಲರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಸಾಕಷ್ಟು ಮಂದಿ ಸಿನಿಮಾದ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಹಾಗೂ ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡಿದ್ದಾರೆ.


ಇದೀಗ ಪುಟ್ಟ ಬಾಲಕಿ ತನ್ನ ತಾಯಿಯೊಂದಿಗೆ ಶ್ರೀವಲ್ಲಿ ಹಾಡಿಗೆ ಕುಣಿದು ಕುಪ್ಪಳಿಸಿರುವ ಸುಂದರ ವಿಡಿಯೋ ವೈರಲ್ ಆಗಿದೆ.

ತಾಯಿ-ಮಗಳು ಸಾಂಪ್ರದಾಯಿಕ ಲೆಹೆಂಗಾ-ಚೋಲಿಯನ್ನು ಧರಿಸಿ ತಮ್ಮದೇ ಆದ ಶೈಲಿಯಲ್ಲಿ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಇವರನ್ನು ನಿವೇದಿತಾ ಶೆಟ್ಟಿ ಹೆಗ್ಡೆ ಮತ್ತು ಇಶಾನ್ವಿ ಹೆಗ್ಡೆ ಎಂದು ಗುರುತಿಸಲಾಗಿದೆ. ಅವರು ತಮ್ಮ ಯೂಟ್ಯೂಬ್ ಚಾನೆಲ್ ಲಾಸ್ಯದಲ್ಲಿ ಆಗಾಗ್ಗೆ ನೃತ್ಯದ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم