ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಲಾರಿ ಟೈರ್ ಸ್ಫೋಟ; ಬೆಂಕಿಗಾಹುತಿಯಾದ ಲಾರಿ

ಲಾರಿ ಟೈರ್ ಸ್ಫೋಟ; ಬೆಂಕಿಗಾಹುತಿಯಾದ ಲಾರಿ

 


ಬಳ್ಳಾರಿ: ಚಲಿಸುತ್ತಿದ್ದ ಲಾರಿಯ ಟೈರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರುವ ಘಟನೆಯೊಂದು ಜಿಲ್ಲೆಯ ನಿಡಗುಂದಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಅಬ್ಬಿಹಾಳ ಕ್ರಾಸ್ ಬಳಿ‌ ನಡೆದಿದೆ.

ಬಳ್ಳಾರಿಯಿಂದ ಔರಂಗಬಾದ್ ಗೆ ಕಲ್ಲಿದ್ದಿಲು ಪುಡಿ ಸಾಗಿಸುತ್ತಿದ್ದ ಲಾರಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಲಾರಿ ಬೆಂಕಿಗಾಹುತಿಯಾಗಿದೆ.

ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ‌ ನಂದಿಸಿದ್ದಾರೆ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ.

ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.

0 تعليقات

إرسال تعليق

Post a Comment (0)

أحدث أقدم