ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಳಿಯಾರು ಪರಿಸರದಲ್ಲಿ ಕಾಡಾನೆ ಹಾವಳಿ: ಕೃಷಿನಾಶವಾದ ಸ್ಥಳಕ್ಕೆ ಸಾಂತ್ವನ ಭೇಟಿ

ಮುಳಿಯಾರು ಪರಿಸರದಲ್ಲಿ ಕಾಡಾನೆ ಹಾವಳಿ: ಕೃಷಿನಾಶವಾದ ಸ್ಥಳಕ್ಕೆ ಸಾಂತ್ವನ ಭೇಟಿ



ಕಾಸರಗೋಡು: ಮುಳಿಯಾರು ಗ್ರಾಮದ ಚೆಮ್ಬಲಾಂಗುಯಿ, ಮುನಿಯಂಗಳ, ಕೊಳಂಬೆ, ಅತ್ತಿಕ್ಕಯೆ, ನೀರಳಪ್ಪು ಮೊದಲಾದ ಸ್ಥಳಗಳಲ್ಲಿ ಕೃಷಿ ಕ್ಷೇತ್ರಗಳಿಗೆ ಆನೆಗಳು ನುಗ್ಗಿ ವಿಪರೀತ ನಾಶನಷ್ಟಗಳನ್ನು ಉಂಟುಮಾಡುತ್ತಿವೆ. ಕೆಲವು ಸಮಯಗಳಿಂದ ಈ ಪರಿಸರದಲ್ಲಿ ನಿರಂತರವಾಗಿ ಆನೆಗಳ ಉಪಟಳ ಮುಂದುವರಿದಿದ್ದು ಪರಿಸ್ಥಿತಿ ದುರಂತಮಯವಾಗಿದೆ.


ಮುನಿಯಂಗಳದ ಸಮೀಪ ಚೊಟ್ಟೆ ಕೊಳಂಬೆ ಶಂಕರ ಭಟ್, ಅತ್ತಿಕ್ಕಯೆ ಶ್ರೀಕೃಷ್ಣ ಭಟ್, ಮುನಿಯಂಗಳ ರಾಧಾಕೃಷ್ಣ ಭಟ್, ಕುಂಞಿರಾಮನ್ ನಾಯರ್, ನಾರಾಯಣನ್ ನಾಯರ್ ಮತ್ತು ಆ ಪರಿಸರದ ಹಲವು ಕೃಷಿಕ ಬಾಂಧವರ ಸ್ಥಳಗಳಿಗೆ ಆನೆಗಳು ಹಾವಳಿ ಮಾಡುತ್ತಾ ಇದ್ದು ಸ್ಥಿತಿ ಗಂಭೀರವಾಗಿದೆ.


ಮುಳ್ಳೇರ್ಯ ಹವ್ಯಕ ಮಂಡಲ ಚಂದ್ರಗಿರಿ ವಲಯದ ಸಹಾಯ ಪ್ರಧಾನ ಡಾ. ಶ್ರೀಕೃಷ್ಣ ರಾಜ ಕಾಟಿಪಳ್ಳ ಅವರ ನೇತೃತ್ವದಲ್ಲಿ ಈ ಮನೆಗಳನ್ನು ಭೇಟಿ ಮಾಡಿ ಹಾಳುಗೆಡವಿದ ಸ್ಥಳಗಳನ್ನು ಸಂದರ್ಶನ ಮಾಡಲಾಯಿತು. ಈ ಮನೆಯವರ ಸ್ಥಳಗಳನ್ನು ಸಂದರ್ಶಿಸಿ ಮನೆಯವರನ್ನು ಕಂಡು ಸಾಂತ್ವನ ಹೇಳಲಾಯಿತು.


ತಂಡದಲ್ಲಿ ಚಂದ್ರಗಿರಿ ವಲಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಮೀನಗದ್ದೆ, ಮಂಡಲ ಮಾತೃ ಪ್ರಧಾನೆ ಗೀತಾ ಲಕ್ಷ್ಮಿ ಅನಘ, ಮಂಡಲ ಶಿಷ್ಯ ಮಾಧ್ಯಮ ಪ್ರಧಾನ ಗೋವಿಂದ ಬಳ್ಳಮೂಲೆ ಇವರು ಜೊತೆಗಿದ್ದರು.


ಈ ಸಮಸ್ಯೆಯ ಪರಿಹಾರಕ್ಕಾಗಿ ಸಂಬಂಧಿತ ಅಧಿಕಾರಿಗಳಿಗೆ ವಿಚಾರವನ್ನು ತಿಳಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಮಾಲೋಚಿಸಲಾಯಿತು.

0 تعليقات

إرسال تعليق

Post a Comment (0)

أحدث أقدم