ರಬಕವಿ-ಬನಹಟ್ಟಿ : ಕಳೆದ ವಾರ ರಾತ್ರಿ ವೇಳೆ ಬನಹಟ್ಟಿಯ ಗುಂಡಯ್ಯಸ್ವಾಮಿ ದೇವಸ್ಥಾನ ಹತ್ತಿರ ವೇಗವಾಗಿ ಬಂದ ಬೈಕ್ ಸವಾರ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ವಿಜಯಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ರಾತ್ರಿ ಮೃತಪಟ್ಟರು.
ಬನಹಟ್ಟಿಯ ಸೋಮವಾರ ಪೇಟೆ ನಿವಾಸಿ ಶೈಲಾ ಮಲ್ಲೇಶಪ್ಪ ಉಮದಿ (51) ಮೃತ ದುರ್ದೈವಿಯಾಗಿದ್ದಾರೆ.
ಮಾರುಕಟ್ಟೆಯಿಂದ ತಮ್ಮ ಮನೆಗೆ ನಡೆದುಕೊಂಡು ಹೋಗುವಾಗ ಬೈಕ್ ಸವಾರನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ.
ಈ ಬಗ್ಗೆ ರವಿವಾರ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಸುರೇಶ ಮಂಟೂರ ತನಿಖೆ ಮುಂದುವರೆಸಿದ್ದಾರೆ.
إرسال تعليق