ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜ.12: ಕರಾವಳಿ ಲೇಖಕಿಯರ ವಾಚಕಿಯರ ಸಂಘದ ದತ್ತಿ ಪ್ರಶಸ್ತಿ ಪ್ರದಾನ

ಜ.12: ಕರಾವಳಿ ಲೇಖಕಿಯರ ವಾಚಕಿಯರ ಸಂಘದ ದತ್ತಿ ಪ್ರಶಸ್ತಿ ಪ್ರದಾನ


ಮಂಗಳೂರು: ನಗರದ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ದತ್ತಿ ಪ್ರಶಸ್ತಿ ಹಾಗೂ ದತ್ತಿ ಬಹುಮಾನ ಜನವರಿ 12ರಂದು ಪಾದುವಾ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಪಾದುವಾ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.


ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಬಿ.ಎ. ವಿವೇಕ ರೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹಿರಿಯ ಲೇಖಕಿಯರ ಹೆಸರಿನ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡುವರು.


ಕಾರ್ಯಕ್ರಮದಲ್ಲಿ ಡಾ. ಸುನೀತಾ ಎಂ. ಶೆಟ್ಟಿ ಪ್ರಾಯೋಜಿತ 'ತೌಳವ ಸಿರಿ' ಪ್ರಶಸ್ತಿಯನ್ನು ತುಳು-ಕನ್ನಡ ಸಂಶೋಧಕಿ, ಲೇಖಕಿ ಡಾ. ಇಂದಿರಾ ಹೆಗ್ಗಡೆ ಅವರಿಗೂ ನಾಡೋಜ ಸಾರಾ ಅಬೂಬಕರ್ ದತ್ತಿ ಪ್ರಶಸ್ತಿಯನ್ನು ಸಮಾಜಸೇವಕಿ ತಬಸ್ಸುಮ್ ಅವರಿಗೂ ಪ್ರದಾನ ಮಾಡಲಾಗುವುದು.


ಚಂದ್ರಭಾಗಿ ರೈ ದತ್ತಿ ಬಹುಮಾನವನ್ನು ನಿರ್ಮಲಾ ಸುರತ್ಕಲ್ ಅವರ ಅಪ್ರಕಟಿತ ಕಥಾ ಸಂಕಲನದ ಕತೆಗಾರ್ತಿ ನಿರ್ಮಲಾ ಸುರತ್ಕಲ್ ಅವರಿಗೆ ವಿತರಿಸಲಾಗುವುದು.


ಪಾದುವಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗ್ಲಾಡಿಸ್ ಅಲೊಶಿಯಸ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಸಾರಾ ಅಬುಬಕರ್ ಅವರ ಸೊಸೆ ಡಾ. ಸಕೀನಾ ನಾಸೆರ್, ತೀರ್ಪುಗಾರರ ಪರವಾಗಿ ರೂಪಕಲಾ ಆಳ್ವ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಸಂಸ್ಧೆಯ ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم