ಸುರತ್ಕಲ್: ಸಾಲ ಬಾಧೆಯಿಂದ ಬೇಸತ್ತು 26 ರ ಯುವಕ ಆಫೀಸ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿಯಲ್ಲಿ ಸೋಮವಾರ ನಡೆದಿದೆ.
ಕಿನ್ನಿಗೋಳಿ (ಮುಲ್ಕಿ) ಯ ಪಕ್ಷಿಕೆರೆ ಎಸ್ಓ ಲೇಔಟ್ ನ ಸುಶಾಂತ್ (26) ಕೆಲಸ ಮಾಡುತ್ತಿರುವ ಆಫೀಸ್ ನಲ್ಲಿ ಟವೆಲ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸುಶಾಂತ್ ಪೋಷಕರು 15 ವರ್ಷಗಳ ಹಿಂದೆ ವಿಧಿವಶರಾಗಿದ್ದು, ಸಹೋದರ ಅಶ್ವಿತ್ (31) ಅವರನ್ನು ಅಗಲಿದ್ದಾರೆ.
ಸಾಯುವ ಮೊದಲು ಕ್ಷಮೆಯಾಚಿಸಿ, ಸಾಲದ ಕಾರಣದಿಂದ ಈ ನಿರ್ಧಾರ ಮಾಡಿದ್ದೇನೆ. ತುಳು ಮೌಖಿಕ ಭಾಷೆ ಬಳಸಿ ಕನ್ನಡ ಭಾಷೆಯಲ್ಲಿ ಡೆತ್ ನೋಟ್ ಬರೆದಿಡಲಾಗಿದೆ.
إرسال تعليق