ಬರಬರುತ್ತಾ ನಾವು ಪ್ರಕೃತ್ತಿದತ್ತ ಔಷಧಿಗಿಂತ ಪಾಶ್ಚಿಮಾತ್ಯ ವೈದ್ಯಕೀಯ ವ್ಯವಸ್ಥೆಗೆ ಹೆಚ್ಚು ಒತ್ತು ಕೊಡಲು ಪ್ರಾರಂಭಿಸಿದೆವು. ಮನುಷ್ಯನ ಜೀವನ ಕ್ರಮ ಬದಲಾಯಿತು. ಆಹಾರ ಪದ್ಧತಿಯೂ ಬದಲಾಯಿತು. ಕಾಲಕ್ರಮೇಣ ತಂತ್ರಜ್ಞಾನದ ಅಭಿವೃದ್ಧಿ ದುಡಿಮೆಯನ್ನೂ ಸುಲಭಗೊಳಿಸಿತು. ಬೆವರು ಹರಿಸಿ ದುಡಿಯೋ ಜನರು ಬೆವರು ಸುರಿಸುತ್ತಲೇ ಸತ್ತರು. ಶ್ರೀಮಂತರು ಮಾತ್ರ ಪ್ರಗತಿಯ ಪಥ ಸಾಗುತ್ತಲೇ ಹೋದರು. ಎಲ್ಲಾ ವಿದ್ಯಾಮಾನಕ್ಕೆ ಅಂಟಿ ಹೋದ ಮಾನವ ಇಂದು ರೋಗಗ್ರಸ್ಥನಾಗಿ ಕೂತಿದ್ದಾನೆ.
ಅಲ್ಲಾ ಇದು ಯಾವ ರೋಗ ಅದಕ್ಕೆ ಏನು ಔಷಧಿ ಸೂಕ್ತ ಎಂದು ಪರಾಮರ್ಶಿಸುವಲ್ಲಿ ಮತ್ತೊಂದು ರೋಗದ ಜನನವಾಗಿರುತ್ತೆ. ರೋಗದ ವೈರಸ್ ಗಳನ್ನು ಹುಡುಕುತ್ತಾ ಹೋದಂತೆ ಮಾನವ ಲೋಕ ಎಲ್ಲಿ ವೈರಸ್ ಗಳದ್ದೇ ಲೋಕವಾಗಿ ಬಿಡುತ್ತಾ ಅನ್ನೋ ಭಯವೂ ಕಾಡುತ್ತೆ. ಕಣ್ಣಿಗೆ ಕಾಣದ ರುಜಿನದಿಂದ ಅದೆಂಥಾ ಪರಿಣಾಮ ಅಲ್ಲವೇ. ಇದನ್ನು ಪ್ರಕೃತಿಯ ಆಟವೆನ್ನದೆ ಮತ್ತೇನು ಹೇಳಲು ಸಾಧ್ಯ.
ನಿಸರ್ಗದತ್ತ ಸಂಪನ್ಮೂಲಗಳನ್ನು ಸರಿಯಾಗಿ ಬಳಸುತ್ತಿದ್ದ ಮಾನವನಿಗೆ ಇಂದು ಅದರಲ್ಲೂ ವಿಷ ಗೋಚರಿಸುತ್ತಿದೆ. ರೋಗಕ್ಕೆ ರಾಗದಂತೆ ತಾಳ, ಲಯದ ಅಗತ್ಯವುಂಟೇ ಹೇಳಿ. ಇಂದು ಕೇಳರಿಯದ ಹೆಸರುಗಳಲ್ಲಿ ಮಾಗದ ಗಾಯಗಳಾಗಿ ರೋಗಗಳ ಸೃಷ್ಠಿಯಾಗುತ್ತಿದೆ. ವೈದ್ಯಕೀಯ ಕ್ಷೇತ್ರ ಅದೆಷ್ಟು ಶ್ರಮಿಸುತ್ತಿದ್ದರೂ ಇಂದು ಗೆಲ್ಲುವುದು ರೋಗವೋ, ವೈದ್ಯಲೋಕವೋ ಕಾದುನೋಡಬೇಕಾಗಿದೆ.
- ಅರ್ಪಿತಾ ಕುಂದರ್
إرسال تعليق