ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನರು ದೇವರಂತೆ ದೈವದ ಮೇಲೂ ಅತೀವ ಭಕ್ತಿ ಹೊಂದಿದವರು. ಇಲ್ಲಿ ದೈವಸ್ಥಾನಗಳಿಗೆ ಅದರದ್ದೇ ಆದ ಗೌರವವಿದೆ. ತುಳುನಾಡ ಕಾರ್ಣಿಕದ ದೈವ ಕಲ್ಲುರ್ಟಿಯ ಜೀವನ ಚರಿತ್ರೆಯನ್ನೊಳಗೊಂಡ " ಕಾರ್ನಿಕೊದ ಕಲ್ಲುರ್ಟಿ" ತುಳು ಸಿನಿಮಾ ಡಿಸೆಂಬರ್ 3ರಿಂದ ಕರಾವಳಿಯ ವಿವಿಧ ಸಿನಿಮಾ ಮಂದಿರದಲ್ಲಿ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ, ನಿರ್ಮಾಪಕ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.
ಕಲ್ಲುರ್ಟಿ ಕಲ್ಕುಡರ ಹುಟ್ಟು, ಬಾಲ್ಯ ಹಾಗೂ ಬಳಿಕ ಅವರು ಅನ್ಯಾಯಕ್ಕೊಳಗಾಗಿ ನೊಂದು ಮನುಷ್ಯ ರೂಪ ತ್ಯಜಿಸಿ, ಮಾಯೆಗೆ ಹೋಗಿ ಅರಸನ ವಿರುದ್ಧ ಸೇಡು ತೀರಿಸಿಕೊಂಡು ದೈವಗಳಾಗಿ ಈ ಮಣ್ಣಲ್ಲಿ ರೂಪ ಪಡೆಯುವರೆಗಿನ ಜೀವನದ ಕಥೆಯನ್ನು ಸಿನಿಮಾದಲ್ಲಿ ಹೆಣೆಯಲಾಗಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಭಾರತ್ ಮಾಲ್ ನ ಬಿಗ್ ಸಿನಿಮಾಸ್ ನಲ್ಲಿ ಬೆಳಿಗ್ಗೆ 9.30ಕ್ಕೆ ಚಿತ್ರ ಬಿಡುಗಡೆಯಾಗಲಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق