ಪುಂಜಾಲಕಟ್ಟೆ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾಯೋಜನೆ ಘಟಕ 1 ಮತ್ತು 2ರ ಆಶ್ರಯದಲ್ಲಿ "ಸದೃಢ ದೇಶ ಕಟ್ಟುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ" ವಿಶೇಷ ಉಪನ್ಯಾಸ ಮತ್ತು ದತ್ತು ಗ್ರಾಮ ಸ್ವೀಕಾರ ಕಾರ್ಯಕ್ರಮವನ್ನು ಮಂಗಳವಾರ (ಡಿ.21) ಹಮ್ಮಿಕೊಳ್ಳಲಾಯಿತು.
ದೇವರ ಪ್ರಾರ್ಥನೆಯೊಂದಿಗೆ ಶುರು ಮಾಡಲಾಯಿತು. ನಂತರ ಶಾಹಿದ ರಾಷ್ಟ್ರೀಯ ಸೇವಾ ಯೋಜನೆ ಪದಾಧಿಕಾರಿ ಇವರು ಎಲ್ಲ ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರವಿಶಂಕರ್ ಬಿ ಆಗಮಿಸಿದ್ದರು. ನಮ್ಮ ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರಕಾಶ್ ಕ್ರಮಧಾರಿ ಅವರು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತಮ್ಮ ಪಾತ್ರ ಹಾಗೂ ತಮ್ಮ ಅನುಭವವನ್ನು ಹಂಚಿಕೊಂಡರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ನಂತರ ನಮ್ಮ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಶ್ರೀಮತಿ ಶಶಿಪ್ರಭಾ, ಗ್ರಾಮ ಪಂಚಾಯತ್ ಅಧ್ಯಕ್ಷರು ಮಡಂತ್ಯಾರು.ಇವರು ತಮ್ಮ ಗ್ರಾಮದ ಪ್ರದೇಶವನ್ನು ನಮಗೆ ಅಂದರೆ ರಾಷ್ಟ್ರೀಯ ಸೇವಾ ಯೋಜನೆಗೆ ದತ್ತು ನೀಡಿದರು ಹಾಗೂ ಅವರು ರಾಷ್ಟ್ರೀಯ ಸೇವಾ ಯೋಜನೆಯನ್ನು ಅಳವಡಿಸಿ ನಮ್ಮ ದೇಶಕ್ಕೆ ನಮ್ಮ ಸೇವೆ ಎನ್ನುವ ಮೂಲಕ ಸೇವೆ ಮಾಡಿ ಎಂದರು. ಮಡಂತ್ಯಾರು ಗ್ರಾ.ಪಂ. ಕಾರ್ಯದರ್ಶಿ ಮೌರ್ಲಿನ್ ಕ್ರಿಶ್ಚಿಯನ್ ಡಿಸೋಜ ಇವರು ಅತಿಥಿಯಾಗಿ ಉಪಸ್ಥಿತರಿದ್ದರು.
ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ಸಲಹಾ ಸಮಿತಿಯ ಸದಸ್ಯರಾದ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ದೀಕ್ಷಿತ ವಿ, ಹಾಗೂ ರಾಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶೇಖರ್ ಕೆ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿಭಾ ವೇದಿಕೆ ಇದರ ಸಂಚಾಲಕರಾದ ಡಾ. ವಿಶಾಲ್ ಪಿಂಟೋ ಆಗಮಿಸಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾ ಅಧಿಕಾರಿಗಳಾದ ರಾಜೇಶ್ವರಿ ಹೆಚ್ ಎಸ್ ಹಾಗೂ ಸಂತೋಷ್ ಪ್ರಭು ಎಂ ಇವರು ಕಾರ್ಯಕ್ರಮದಲ್ಲಿ ಉಪಸಿತರಿದ್ದರು.
2020-21 ನೇ ಸಾಲಿನ ಪದಾಧಿಕಾರಿಗಳು ಕೂಡ ಹಾಜರಿದ್ದರು. ನಂತರ ಕನ್ನಡ ರಾಜ್ಯೋತ್ಸವ ಇದರ ಅಂಗವಾಗಿ ನಡೆದ ಭಾಷಣ ಮತ್ತು ಪ್ರಬಂಧ ಸ್ಪರ್ದೆಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಅಭಿನಂದಿಸಲಾಯಿತು. ನಂತರ 2020-21 ಸಾಲಿನ ಪಾದಾಧಿಕರಿಗಳಿಗೆ ಗಿಡಗಳನ್ನು ನೀಡಲಾಯಿತು.
ಪ್ರೊ. ರವಿಶಂಕರ್ ಬಿ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ನಂತರ ಸುಚಿತ್ರಾ ರಾಷ್ಟ್ರೀಯ ಸೇವಾ ಯೋಜನೆಯ ಪದಾಧಿಕಾರಿ ಇವರು ಬಂದ ಎಲ್ಲ ಅತಿಥಿಗಳಿಗೆ ಧನ್ಯವಾದವನ್ನು ಸಮರ್ಪಿಸಿದರು. ಎನ್‌ಎಸ್‌ಎಸ್ ಪದಾಧಿಕಾರಿ ಕೆ ಸುರಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق