ಪುಂಜಾಲಕಟ್ಟೆ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ (ಡಿ.22) ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನೆ ಮತ್ತು ಅಭಿವಿನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾದ ಶ್ರೀಮತಿ ಅಮ್ಮಿ ಎ ರವರು ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ಯಾವ ರೀತಿಯಲ್ಲಿ ಜನರ ನಡುವೆ ಸಂಬಂಧವನ್ನು ಹೊಂದಿದೆ, ರೋಗಿಗಳಿಗೆ ಹೇಗೆ ನೆರವನ್ನು ನೀಡುತ್ತಾರೆ, ಕೋವಿಡ್ 19 ಅನ್ನು ಹೇಗೆ ಹಿಮ್ಮೆಟ್ಟಿಸಬೇಕು ಹಾಗೂ ಮಾನಸಿಕ ಆರೋಗ್ಯ ಮತ್ತು ಇಂದಿನ ಯುವಜನತೆ ವಿಷಯಗಳ ಕುರಿತಾಗಿ ಮಾಹಿತಿಯನ್ನು ನೀಡಿದರು.
ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ಮತ್ತು ಕಾರ್ಯಕ್ರಮದ ಅಧ್ಯಕ್ಷರು ಉದ್ಘಾಟನೆ ಮಾಡಿದರು. ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಪ್ರೊ. ಗೀತಾರವರು ಪ್ರಸ್ತಾವಿಕ ನುಡಿಗಳನ್ನಾಡಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ನಿರ್ವಹಣಾ ಶಾಸ್ತ್ರದ ಮುಖ್ಯಸ್ಥರಾದ ಪ್ರೊ.ಪ್ರೀತಿ ಕೆ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಧ್ಯಕ್ಷೀಯ ಭಾಷಣ ಮಾಡಿದ ಪ್ರೊ.ಪ್ರೀತಿ ಕೆ ರಾವ್ ರವರು ರೆಡ್ ಕ್ರಾಸ್ ಮಹತ್ವ ಮತ್ತು ವಿದ್ಯಾರ್ಥಿಗಳಾಗಿ ರೆಡ್ ಕ್ರಾಸ್ ನ ಮೌಲ್ಯಗಳನ್ನು ಹೇಗೆ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಪ್ರೊ.ರಾಜೇಶ್ಚರಿ, ಪ್ರೊ.ಆಂಜನೇಯ, ಪ್ರೊ.ದೀಕ್ಷಿತ ಹಾಗೂ ಇತರ ಉಪನ್ಯಾಸಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುಮಲತಾ ಸ್ವಾಗತಿಸಿದರು. ಶ್ರಾವ್ಯ ವಂದಿಸಿದರು. ರೆಡ್ ಕ್ರಾಸ್ ಚಟುವಟಿಕೆಗಳ ಬಗ್ಗೆ ಶಾಹಿನ ಮಾಹಿತಿ ನೀಡಿದರು. ಸಾಗರ್ ನಿರೂಪಿಸಿದರು. ಘಟಕದ ನಾಯಕರಾದ ಫಾತಿಮಾತ್ ರಫೀಯಾ ಮತ್ತು ಕಿರಣ್ ಹೊಳ್ಳ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق