ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕ್ರಿಸ್ಮಸ್ ಹೊಸವರ್ಷ ಸಂಭ್ರಮ- ಡಿ.26ಕ್ಕೆ ಬಹುಭಾಷಾ ಕವಿಗೋಷ್ಠಿ

ಕ್ರಿಸ್ಮಸ್ ಹೊಸವರ್ಷ ಸಂಭ್ರಮ- ಡಿ.26ಕ್ಕೆ ಬಹುಭಾಷಾ ಕವಿಗೋಷ್ಠಿ


ಮಂಗಳೂರು: ಪಿಂಗಾರ ಪತ್ರಿಕೆ ಬಳಗದ ಮುಖ್ಯಸ್ಥರಾದ ರೇಮಂಡ್ ಡಿ ಕುನ್ಜಾ ತಾಕೊಡೆ ಸಾರಥ್ಯದಲ್ಲಿ ಕಥಾ ಬಿಂದು ಪ್ತಕಾಶನದ ಪಿ.ವಿ‌ ಪ್ರದೀಪ್ ಕುಮಾರ್ ಸಹಕಾರದಲ್ಲಿ‌, ಡಾ ಸುರೇಶ ನೆಗಳಗುಳಿ ಸಂಚಾಲಕತ್ವದಲ್ಲಿ ಕ್ರಿಸ್ಮಸ್- ಹೊಸವರ್ಷದ ಸಂಭ್ರಮ‌ದಲ್ಲಿ ಕವಿಗೋಷ್ಠಿಯನ್ನು ಮಂಗಳೂರು ಡಾನ್ ಬಾಸ್ಕೋ ಹಾಲ್ ನಲ್ಲಿ‌ ಆಯೋಜಿಸಲಾಗಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ದಿನಾಂಕ 26ರ ಇಳಿಹಗಲು 3 ಗಂಟೆಯಿಂದ ರಾಜ್ಯ ಮಟ್ಟದ ಹೆಸರಾಂತ ಕವಿಗಳಿಂದ  ಡಾ ಸುರೇಶ ನೆಗಳಗುಳಿಯವರ ಸಂಚಾಲಕತ್ವದ ಬಹು ಭಾಷಾ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು‌ ವೆಂಕಟೇಶ ಗಟ್ಟಿಯವರೂ ಮುಖ್ಯ ಅತಿಥಿಗಳಾಗಿ ಅಭಿಮೊ ಟೆಕ್ನಾಲಜೀಸ್ ನ ಸಂಸ್ಥಾಪಕ ನವೀನ್ ನಾಯಕ್ ರವರೂ ವಹಿಸಲಿದ್ದಾರೆ.


ಖ್ಯಾತ ಕವಿಗಳಾದ ಪರಿಮಳ ಮಹೇಶ್, ಹಿತೇಷ್ ಕುಮಾರ್, ಕೋಟ ಚಂದನ ಜಯಾನಂದ ಪೆರಾಜೆ, ಡಾ ವಾಣಿಶ್ರೀ ಕಾಸರಗೋಡು, ಎಂ ಆರ್ ಗುರುರಾಜ್, ಸೋಮಶೇಖರ್ ಹಿಪ್ಪರಗಿ ರಶ್ಮಿ ಸನಿಲ್, ರೇಖಾ ಸುದೇಶ್, ನವ್ಯಾ ಪ್ರಸಾದ್ ನೆಲ್ಯಾಡಿ ಮಂಜುಶ್ರೀ ನಲ್ಕ, ಸೌಮ್ಯ ಆರ್ ಶೆಟ್ಟಿ, ಜಯಲಕ್ಷ್ಮಿ ಶರತ್ ಶೆಟ್ಟಿ, ರೇಖಾ ನಾರಾಯಣ್, ಅರ್ಚನಾ ಕುಂಪಲ, ಜಯಾನಂದ ಪೆರಾಜೆ, ದೀಪಾ ಪಾವಂಜೆ, ವಿದ್ತ್ಯಾ ಶ್ರೀ ಅಡೂರ್, ದೇವರಗುಡಿ ಶಿವರಾಜ್, ರವಿಕುಮಾರ್ ನಾಗರ ಹಳ್ಳಿ, ಶರಣ್ಯ ಬೆಳುವಾಯಿ, ಅಶ್ವಿನಿ ಕಡ್ತಲ, ಮನ್ಸೂರ್ ಮುಲ್ಕಿ, ಶಾಂತಾ ಪುತ್ತೂರು, ದಿಲೀಪ್ ವೇದಿಕ್ ಕಡಬ, ಲಕ್ಷ್ಮಿ ಬಿ.ಎಸ್ ಮುಂತಾದ ಕವಿಗಳು ಬಹು ಭಾಷಾ ಕವನ ವಾಚಿಸಲಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم