ಬಾಯಾರು: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಡಿಸೆಂಬರ್ ತಿಂಗಳ ಸಭೆಯು ಎಂ. ಮಹಾಲಿಂಗ ಭಟ್, ಮಾಣಿ ಇವರ ನಿವಾಸದಲ್ಲಿ ದಿನಾಂಕ 04- 12- 2021 ರಂದು ನಡೆಯಿತು.
ಶಂಖನಾದ, ಧ್ವಜಾರೋಹಣ, ಗುರುವಂದನೆಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ನೂತನ ವಲಯಾಧ್ಯಕ್ಷರಾದ ಬಿ.ಎಲ್. ಶಂಭು ಹೆಬ್ಬಾರ್ ವಹಿಸಿದರು.
ನಿಕಟಪೂರ್ವ ಕಾರ್ಯದರ್ಶಿ ಬೆಜಪ್ಪೆ ಸುಬ್ರಹ್ಮಣ್ಯ ಭಟ್ ಗತ ಸಭೆಯ ವರದಿಯನ್ನು ನೀಡಿ ನೂತನವಾಗಿ ನೇಮಕಗೊಂಡ ವಲಯ ಸಮಿತಿಯ ಪದಾಧಿಕಾರಿಗಳಿಗೆ ಶ್ರೀ ಸಂಸ್ಥಾನದವರು 29- 11- 2021ರಂದು ಗೋಕರ್ಣದ ಅಶೋಕೆಯಲ್ಲಿ ನಿರೂಪ ಮತ್ತು ಆಶೀರ್ವಾದ ಮಂತ್ರಾಕ್ಷತೆ ನೀಡಿ ಹರಸಿದ ವಿಚಾರವನ್ನು ತಿಳಿಸಿದರು.
ಕಾರ್ಯದರ್ಶಿಯಾಗಿ ತಮ್ಮ ಸೇವಾವಧಿಯ ಸಂದರ್ಭದಲ್ಲಿ ಸಹಕಾರ ನೀಡಿದ ಎಲ್ಲಾ ಪದಾಧಿಕಾರಿಗಳು, ಘಟಕಾಧ್ಯಕ್ಷರು ಹಾಗೂ ಶಿಷ್ಯಬಂಧುಗಳನ್ನು ಅವರು ಸ್ಮರಿಸಿಕೊಂಡು ಧನ್ಯವಾದಗಳನ್ನು ಸಮರ್ಪಿಸಿದರು.
ಸೇವಾವಧಿ ಪೂರೈಸಿದ ವಲಯಾಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್ ಅವರು ಸಭೆಯನ್ನುದ್ದೇಶಿ ಮಾತನಾಡಿ ನೂತನ ಪದಾಧಿಕಾರಿಗಳಿಗೆ ತಮ್ಮ ಅನುಭವಗಳನ್ನು ಹಂಚಿ , ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಮಾಹಿತಿಗಳನ್ನು ನೀಡಿದರು. ತಮಗೆ ಈ ವರೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿ, ನೂತನ ಸಮಿತಿಗೂ ಪೂರ್ಣ ಪ್ರಮಾಣದ ಸಹಕಾರ ನೀಡುವಂತೆ ಕೋರಿಕೊಂಡರು.
ನೂತನ ಪದಾಧಿಕಾರಿಗಳಿಗೆ ಶ್ರೀ ಗುರುಗಳಿಂದ ಆಶೀರ್ವಾದಪೂರ್ವಕ ನೀಡಲಾದ ಮಂತ್ರಾಕ್ಷತೆ ಸಹಿತ ನಿರೂಪ ಪತ್ರವನ್ನು ನೂತನ ಅಧ್ಯಕ್ಷರಾದ ಬಿ.ಎಲ್. ಶಂಭು ಹೆಬ್ಬಾರ್ ಇವರು ನೀಡಿದರು.
ಕೋಶಾಧಿಕಾರಿ ರಾಜಗೋಪಾಲ ಅಮ್ಮಂಕಲ್ಲು ಈ ವರೆಗಿನ ಲೆಕ್ಕಪತ್ರ ಮಂಡನೆ ಮಾಡಿದರು.
ನೂತನ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಮಂಡಲ ಸುತ್ತೋಲೆಯನ್ನು ವಾಚಿಸಿದರು. ಶುಭಕೃತ್ ಸಂವತ್ಸರದ ಧಾರ್ಮಿಕ ಪಂಚಾಂಗಗಳನ್ನು ಶಿಷ್ಯರ ಮನೆಗಳಿಗೆ ವಿತರಿಸಲು ಘಟಕಾಧ್ಯಕ್ಷರಿಗೆ ನೀಡಲಾಯಿತು. ಲಕ್ಷ್ಮೀ ಲಕ್ಷಣದಲ್ಲಿ ಪ್ರತಿ ಮನೆಯ ಎಲ್ಲಾ ಸದಸ್ಯರ ಹಾಗೂ ಮೂರು ತಲೆಮಾರು ಹಿಂದಿನ ಹಿರಿಯರ ಹೆಸರನ್ನು ಸೇರ್ಪಡೆಗೊಳಿಸುವ ಕಾರ್ಯ ಆದಷ್ಟು ಬೇಗ ಮಾಡಿ ಮುಗಿಸಲು ತೀರ್ಮಾನಿಸಲಾಯಿತು
ಈ ಸಂದರ್ಭದಲ್ಲಿ ರಮ್ಯ ಲಕ್ಷ್ಮಿ MSc B.ed, ಅಮ್ಮಂಕಲ್ಲು ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇತ್ತೀಚೆಗೆ ಶ್ರೀ ರಾಮ ಪಾದ ಸೇರಿದ ವಲಯದ ಪದ್ಮನಾಭ ಭಟ್ ಎಡಕ್ಕಾನ, ಎಡಕ್ಕಾನ ರಾಮ ಭಟ್ ಪೂಕಳಬೈಲು, ದೇವಕಿ ಭಟ್ ಎಡಕ್ಕಾನ, ಪೆರ್ಮುದೆ, ಈಶ್ವರ ಭಟ್ ಚೆಕ್ಕೆ, ಸುಂದರಿ ಅಮ್ಮ ಮಡ್ವ, ಸೀತಾ ಎಡಕ್ಕಾನ ಬಾಳಿಕೆ, ಇವರ ಸದ್ಗತಿಗೆ ಪ್ರಾರ್ಥಿಸಿ ಶ್ರೀ ರಾಮ ತಾರಕ ಮಂತ್ರ ಜಪಿಸಲಾಯಿತು.
ಸಭಾಧ್ಯಕ್ಷರು ಮಾತನಾಡಿ ತಮ್ಮ ಮುಂದಿನ ಸೇವಾವಧಿಗೆ ಎಲ್ಲರ ಸಹಕಾರವನ್ನು ಕೇಳಿಕೊಂಡರು. ಮನೆ ಯಜಮಾನರಾದ ಎಂ. ಮಹಾಲಿಂಗ ಭಟ್ ಮಾತನಾಡಿ "ತಮ್ಮ ಮನೆಯಲ್ಲಿ ಶ್ರೀಮಠದ ಪದಾಧಿಕಾರಿಗಳ ಸಭೆ ನೆರವೇರಿದ್ದು ತಮ್ಮ ಸೌಭಾಗ್ಯ. ಇದು ತಮಗೆ ಅತ್ಯಂತ ಹರ್ಷ ನೀಡಿದೆ" ಎಂದು ನುಡಿದರು.
ಸಭೆಯಲ್ಲಿ ಘಟಕಾಧ್ಯಕ್ಷರುಗಳು, ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಂತಿ ಮಂತ್ರ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق