ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿರಿಯ ಪತ್ರಕರ್ತ ವಾಗೀಶ್ ನಿಧನ

ಹಿರಿಯ ಪತ್ರಕರ್ತ ವಾಗೀಶ್ ನಿಧನ



ಮಂಗಳೂರು: ಮಂಗಳೂರಿನಲ್ಲಿ ವೃತ್ತಿ ಜೀವನ ಆರಂಭಿಸಿದ ರಾಜ್ಯದ ಹಿರಿಯ ಪತ್ರಕರ್ತ ವಾಗೀಶ್ (46) ಇಂದು ನಿಧನರಾದರು.


ಅವರು ಪತ್ನಿ ಸುಮಾ ಮತ್ತು ಪುತ್ರಿ ಮಂದಾರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಹೊಸದಿಗಂತ ಹಾಗೂ ಜನವಾಹಿನಿಯಲ್ಲಿ ಮಂಗಳೂರು ಕಚೇರಿಯಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಬಳಿಕ, ಈಟಿವಿ, ಟಿವಿ9, ಕಸ್ತೂರಿ ನ್ಯೂಸ್, ಸಮಯ ಟಿವಿ, ಪ್ರಜಾ ಟಿವಿಯಲ್ಲೂ ಸುದ್ದಿ ಮನೆಯ ಪ್ರಮುಖರಾಗಿ ಸೇವೆ ಸಲ್ಲಿಸಿದರು.


ಆ ಬಳಿಕ, ವಿಜಯ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದರು. ಕೆಲ ಕಾಲ ಅಸ್ವಸ್ಥರಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಸುಳ್ಯದ ಪಂಜದಲ್ಲಿ ಮೃತರ ಅಂತಿಮ ವಿಧಿ ವಿಧಾನಗಳು ನಡೆಯಲಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم