ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ. ಕೆ. ಶಿವರಾಮ ಕಾರಂತರ 24ನೇ ಸ್ಮೃತಿ ದಿನಾಚರಣೆ

ಡಾ. ಕೆ. ಶಿವರಾಮ ಕಾರಂತರ 24ನೇ ಸ್ಮೃತಿ ದಿನಾಚರಣೆ



ಉಡುಪಿ: ಡಾ. ಕೋಟ ಶಿವರಾಮ ಕಾರಂತರು ನಮ್ಮನ್ನಗಲಿ 24 ಸಂವತ್ಸರಗಳು ಸಂದಿವೆ. ಅವರ ಕೃತಿಗಳ ಜೊತೆ ಅವರೊಂದಿಗಿನ ನೆನಪುಗಳು ಸಾಕಷ್ಟು ನಮ್ಮಲ್ಲಿದೆ. ಈ ನೆನಪುಗಳ ಹಲವು ಕುರುಹುಗಳು ಡಾ. ಕೆ. ಶಿವರಾಮ ಕಾರಂತ ಸ್ಮೃತಿ ಚಿತ್ರಶಾಲೆಯಲ್ಲಿ ಕಾಣಲು ಸಿಗುತ್ತದೆ. ಇದೇ ಗುರುವಾರ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಡಾ.ಕೆ ಶಿವರಾಮ ಕಾರಂತ ಸ್ಮೃತಿ ದಿನಾಚರಣೆ ಪ್ರಯುಕ್ತ ಕಾರಂತರ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಸಾಲಿಗ್ರಾಮದಲ್ಲಿರುವ ಮಾನಸದಲ್ಲಿ ಮುಕ್ತ ವೀಕ್ಷಣೆಗೆ ಅವಕಾಶ ನೀಡಲಾಗಿದೆ.


ಅಲ್ಲದೆ ಅಂದು ಸಂಜೆ 6:30 ರಿಂದ ನೃತ್ಯಪಥ ನೃತ್ಯನಿಕೇತನ ಕೊಡವೂರು ಇವರ ಫೇಸ್ಬುಕ್ ಪೇಜ್ನಲ್ಲಿ (https://www.facebook.com/nrithyanikethanakodavoor) ಖ್ಯಾತ ಭಾಗವತೆ ಕಾವ್ಯಶ್ರೀ ಅಜೇರು ಭಾಗವತಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಜಾಂಬವತಿ ಕಲ್ಯಾಣ ಪ್ರಸಾರವಾಗಲಿದೆ. 


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 تعليقات

إرسال تعليق

Post a Comment (0)

أحدث أقدم