ಬೆಂಗಳೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಸಿಮೆಂಟ್ ಬೆಲೆಯಲ್ಲಿ ಇಳಿಕೆಯಾಗಿದೆ. ಸಿಮೆಂಟ್ ಬೇಡಿಕೆ ತೀವ್ರ ಕುಸಿದಿರುವುದರಿಂದ ದಕ್ಷಿಣ ರಾಜ್ಯಗಳ ಸಿಮೆಂಟ್ ಉತ್ಪಾದನಾ ಕಂಪನಿಗಳು ಬೆಲೆ ಇಳಿಕೆ ಮಾಡಿವೆ.
50 ಕೆಜಿ ಸಿಮೆಂಟ್ ಚೀಲದ ಬೆಲೆಯಲ್ಲಿ 20-40 ರೂ. ವರೆಗೆ ಇಳಿಕೆಯಾಗಿದೆ. ಕರ್ನಾಟಕದಲ್ಲಿ 20-40 ರೂ. ನಷ್ಟು ಇಳಿಕೆಯಾಗಿದ್ದರೆ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಪ್ರತಿ ಚೀಲಕ್ಕೆ 40 ರೂ. ತಮಿಳುನಾಡಿನಲ್ಲಿ 20 ರೂ.ಗಳವರೆಗೆ ಕಡಿತವಾಗಿದೆ.
ಈ ಬೆಲೆ ಕಡಿತದ ಹಿನ್ನೆಲೆ, ಕರ್ನಾಟಕದಲ್ಲಿ 50 ಕೆಜಿ ಸಿಮೆಂಟ್ ಚೀಲದ ಬೆಲೆ 340 ರೂ. 380 ರೂ.ಗೆ ಇಳಿಕೆಯಾಗಿದೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 280 ರೂ.ನಿಂದ 320 ರೂ. ಇದ್ದರೆ ಕೇರಳದಲ್ಲಿ ಚೀಲದ ಬೆಲೆ 340 ರೂ.ನಿಂದ 380 ರೂ.ಗೆ ಇಳಿಕೆಯಾಗಿದೆ.
إرسال تعليق