ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಲಸಿಕೆ ಪಡೆದುಕೊಳ್ಳದ ಜನರಿಗೆ ರಸ್ತೆಯಲ್ಲೇ ನಿಲ್ಲಿಸಿ ಕೋವಿಡ್ ಲಸಿಕೆ

ಲಸಿಕೆ ಪಡೆದುಕೊಳ್ಳದ ಜನರಿಗೆ ರಸ್ತೆಯಲ್ಲೇ ನಿಲ್ಲಿಸಿ ಕೋವಿಡ್ ಲಸಿಕೆ

 


ದಾವಣಗೆರೆ: ಮಂಡಕ್ಕಿ ಭಟ್ಟಿ ಪ್ರದೇಶದಲ್ಲಿ ರಸ್ತೆಯಲ್ಲಿ ಹೋಗುವವರನ್ನು ನಿಲ್ಲಿಸಿ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಂಡು, ಪಡೆಯದವರಿಗೆ ರಸ್ತೆಯಲ್ಲೇ ಲಸಿಕೆ ನೀಡಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ್‌ ದಾನಮ್ಮನವರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ನೇತೃತ್ವದಲ್ಲಿ ಬುಧವಾರ ಈ ಅಭಿಯಾನ ನಡೆಸಲಾಗಿದೆ.

ಮಂಡಕ್ಕಿ ಭಟ್ಟಿಯ ಒಳಗೆ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದವರಿಗೂ ಲಸಿಕೆ ನೀಡಲಾಯಿತು. ಅಧಿಕಾರಿಗಳು ಮಂಡಕ್ಕಿ ಭಟ್ಟಿಯೊಳಗೆ ಹೊಕ್ಕಿ ಅಲ್ಲಿದ್ದ ಎಲ್ಲರಿಗೂ ಲಸಿಕೆ ನೀಡಿದರು. ಲಸಿಕೆ ಉಸ್ತುವಾರಿ ಹೊತ್ತಿರುವ ಡಾ. ಕೆ.ಎಸ್‌. ಮೀನಾಕ್ಷಿ ಅವರೇ ಸೂಜಿ ಚುಚ್ಚಿದರು.

ಇದೇ ತಂಡವು ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳನ್ನು ನಿಲ್ಲಿಸಿ ಅದರಲ್ಲಿದ್ದ ಪ್ರಯಾಣಿಕರಿಗೆ ಮಾಸ್ಕ್‌ ಬಗ್ಗೆ ಜಾಗೃತಿ ಮೂಡಿಸಿತು. ಮಾಸ್ಕ್‌ ಹಾಕದೇ ಇದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.


0 تعليقات

إرسال تعليق

Post a Comment (0)

أحدث أقدم