ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಳಿಯಾರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವರ್ಷಾವಧಿ ಷಷ್ಠೀ ಉತ್ಸವ, ತುಲಾಭಾರ ಸೇವೆ

ಮುಳಿಯಾರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವರ್ಷಾವಧಿ ಷಷ್ಠೀ ಉತ್ಸವ, ತುಲಾಭಾರ ಸೇವೆ



ಕಾಸರಗೋಡು: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಇಂದು ವರ್ಷಾವಧಿ ಷಷ್ಠೀ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ತುಲಾಭಾರ ಸೇವೆ ನಡೆಸಲಾಯಿತು.

ಇಂದು ಮತ್ತು ನಾಳೆ (ಡಿ.10) ಶುಕ್ರವಾರ ಬ್ರಹ್ಮಶ್ರೀ ಅರವತ್ತ್ ದಾಮೋದರ ತಂತ್ರಿಗಳವರ ನೇತೃತ್ವದಲ್ಲಿ ಈ ಉತ್ಸವಗಳು ಜರಗುತ್ತಿವೆ.

ಇಂದು ಬೆಳಗ್ಗೆ ಗಣಹೋಮ, ನವಕಾಭಿಷೇಕ, ತುಲಾಭಾರಸೇವೆ, ಮಧ್ಯಾಹ್ನ ಪೂಜೆ, ಶ್ರೀಭೂತಬಲಿ ನಡೆಯಿತು.

ನಾಳೆ ಉಷಪೂಜೆ, ಶಿವೇಲಿ, ಪೂಜೆ, ಮಂತ್ರಾಕ್ಷತೆ, ಅನ್ನಪ್ರಸಾದ, ವಿಷ್ಣುಮುರ್ತಿ ದೈವದ ಕೋಲ, ರಾತ್ರಿ- 7.30ರಿಂದ ಶ್ರೀ ರಂಗಪೂಜೆ ನೆರವೇರಲಿದೆ.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم