ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ತಂಗಡಿ; ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿ ಸಾವು

ಬೆಳ್ತಂಗಡಿ; ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿ ಸಾವು

 


ಬೆಳ್ತಂಗಡಿ: ಹಳ್ಳ ದಾಟುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆಯೊಂದು ಮಲವಂತಿಗೆಯಲ್ಲಿ ಜರುಗಿದೆ.

ಇಲ್ಲಿನ ನಿವಾಸಿ ಹಿರಿಮಾರು ನಿವಾಸಿ ಕಿನ್ನಿ ಗೌಡರ ಪುತ್ರ ಗಣೇಶ್ (40) ವರ್ಷ ಎಂಬವರು ತಮ್ಮ ತೋಟದಿಂದ ಅಡಕೆ ಹೆಕ್ಕಿ ಮರಳುವ ವೇಳೆ ಮಲ್ಲಕಜಕ್ಕೆ ಬಳಿ ಹಳ್ಳ ದಾಟುವಾಗ ಕಾಲುಜಾರಿ ರಭಸವಾಗಿ ಹರಿಯುವ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದರು.


ಬಳಿಕ ಸ್ಥಳೀಯರು ಶೋಧ ಕಾರ್ಯ ನಡೆಸಿದ್ದು, ಸ್ವಲ್ಪ ದೂರದ ಕಲ್ಲುಬಂಡೆಯ ಸಂದಿನಲ್ಲಿ ಶವ ಪತ್ತೆಯಾಗಿದೆ. ಮೃತರಿಗೆ ತಂದೆ ತಾಯಿ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

0 تعليقات

إرسال تعليق

Post a Comment (0)

أحدث أقدم