ಯಾದಗಿರಿ: ವಿದ್ಯುತ್ ತಂತಿ ಸ್ಪರ್ಶಿಸಿ ದುರಂತದಲ್ಲಿದ್ದ ಸ್ನೇಹಿತನನ್ನು ರಕ್ಷಿಸಲು ಹೋಗಿ ಇಬ್ಬರೂ ಯುವಕರೂ ಸಾವನ್ನಪ್ಪಿದ ಘಟನೆಯೊಂದು ಯಾದಗಿರಿಯಲ್ಲಿ ನಡೆದಿದೆ. ಕೆಲಸದ ನಿಮಿತ್ತ ನಾರಾಯಣಪೇಟೆಗೆ ಬಂದಿದ್ದ ಸ್ನೇಹಿತರಿಬ್ಬರು ರಾತ್ರಿ ಊಟ ಮುಗಿಸಿ ಬರುವಾಗ ಹೋಟೆಲ್ ಮೇಲ್ಛಾವಣಿ ಹಾದು ಹೋಗುತ್ತಿದ್ದ ವಿದ್ಯುತ್ ತಂತಿ ಸ್ಪರ್ಶವಾಗಿದೆ.
ಇದರಿಂದ ಓರ್ವ ಸ್ನೇಹಿತ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ.ಆತನನ್ನು ರಕ್ಷಿಸಲು ಇನ್ನೊಬ್ಬ ಸ್ನೇಹಿತ ಪ್ರಯತ್ನಿಸಿದ್ದು, ಕೊನೆಗೆ ಇಬ್ಬರೂ ದುರಂತ ಸಾವನ್ನಪ್ಪಿದ್ದಾರೆ.
ಈ ದುರಂತಕ್ಕೆ ಹೋಟೆಲ್ ಮಾಲಿಕನ ನಿರ್ಲ್ಯಕ್ಷವೇ ಕಾರಣ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
إرسال تعليق